

ತುಮಕೂರು : ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ವಾರ್ಗಸೂಚಿ ಅನ್ವಯ ಸೋಂಕು ನಿಯಂತ್ರಣ ಕ್ರಮಗಳನ್ನು ಕಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಎಲ್ಲ ತಾಲೂಕು ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಸಂವಾದ ಮೂಲಕ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಸೇರಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆಗಳನ್ನು ನೀಡಿದರು.
ಎಲ್ಲ ತಾಲೂಕುಗಳಲ್ಲಿ ಆಯಾ ತಹಸೀಲ್ದಾರ್ ನೇತೃತ್ವದಲ್ಲಿ ಕರೊನಾ ನಿಯಂತ್ರಣ ಕಾರ್ಯಪಡೆ ರಚಿಸಿದ್ದು, ತಾಲೂಕು ಆರೋಗ್ಯಾಧಿಕಾರಿ, ಪೊಲೀಸ್ ಇನ್‌ಸ್ಪೆಕ್ಟರ್, ತಾಪಂ ಇಒ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಕರೊನಾ ನಿಯವಾವಳಿ ಪಾಲನೆ ವಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಪ್ರತಿದಿನ ಕನಿಷ್ಠ 3200 ಕೋವಿಡ್ ಪರೀಕ್ಷೆ ವಾಡಬೇಕೆಂಬ ಗುರಿ ನಿಗದಿಪಡಿಸಿದ್ದು, ಆದರಂತೆ 3200 ಕೋವಿಡ್ ಪರೀಕ್ಷೆ ವಾಡಲೇಬೇಕು. ಇದಕ್ಕೆ ಯಾವುದೇ ಕಾರಣ ಹೇಳುವಂತಿಲ್ಲ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪಗೆ ಸೂಚಿಸಿದರು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ದಿನನಿತ್ಯ 800 ಗಂಟಲು ದ್ರವ ವಾದರಿ ಸಂಗ್ರಹ ವಾಡಬೇಕು, ಇದರಲ್ಲಿ 240 ರ‌್ಯಾಟ್ ಟೆಸ್ಟ್ ಹಾಗೂ ಇನ್ನುಳಿದ 560 ಆರ್‌ಟಿಪಿಸಿಆರ್ ಪರೀಕ್ಷೆ ವಾಡಬೇಕು. ತಹಸೀಲ್ದಾರ್ ನೇತೃತ್ವದಲ್ಲಿನ ಕಾರ್ಯಪಡೆ ಕೋವಿಡ್ ಪರೀಕ್ಷೆ, ಪತ್ತೆ, ಚಿಕಿತ್ಸೆ ಹಾಗೂ ನಿರ್ವಹಣೆ ಕ್ರಮಗಳನ್ನು ಅಚ್ಟುಕಟ್ಟಾಗಿ ನಿಭಾಯಿಸಬೇಕು ಎಂದರು.
ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆ, ಸವಾರಂಭಗಳನ್ನು ನಿಷೇಧಿಸಲಾಗಿದೆ, ಸಾವಾಜಿಕ ಆಚರಣೆ ಮತ್ತು ಸವಾರಂಭಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ ನಡೆಯುವ ಮದುವೆಗೆ 100 ಜನ ಹಾಗೂ ತೆರೆದ ಪ್ರದೇಶದಲ್ಲಿ ನಡೆಯುವ ಮದುವೆಗೆ 200 ಜನ ಮೀರಬಾರದು. ಸರ್ಕಾರದ ಈ ವಾರ್ಗಸೂಚಿಗಳನ್ನು ಜನರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಹೊಸ ವಾರ್ಗಸೂಚಿಗಳ ಬಗ್ಗೆ ತಾಲೂಕುಗಳಲ್ಲಿ ತಾಲೂಕು ಅಧಿಕಾರಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒಗಳು ಟಾಂಟಾಂ ಹೊಡೆಸುವ ಮೂಲಕ ಅರಿವು ಮೂಡಿಸಬೇಕು. ವಾಟರ್‌ಮೆನ್, ಆಶಾ ಕಾರ್ಯಕರ್ತೆಯರೂ ಜನರಿಗೆ ಸ್ವಯಂಪ್ರೇರಿತವಾಗಿ ಕೋವಿಡ್ ಪರೀಕ್ಷೆ ವಾಡಿಸಿಕೊಳ್ಳಲು ಮತ್ತು ಲಸಿಕೆ ಪಡೆಯಲು ಅರಿವು ಮೂಡಿಸಿ ಪ್ರೇರೇಪಿಸಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಜಿಪಂ ಸಿಇಒ ಕೆ.ವಿದ್ಯಾಕುವಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ಬಾಬು ಮತ್ತಿತರರು ಇದ್ದರು.
ಮೈಕ್ರೋ ಕಂಟೈನ್ಮೆಂಟ್: ತುಮಕೂರಿನಲ್ಲಿ ಸೋಂಕಿತರ ಪ್ರವಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತ ಪ್ರದೇಶದಲ್ಲಿ ಮೈಕ್ರೋ ಕಂಟೈನ್ಮೆಂಟ್ ರಚಿಸಲಾಗುತ್ತಿದೆ, ಯಾರೂ ಓಡಾಡದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಹೋಟೆಲ್, ಫುಡ್‌ಸ್ಟಾಲ್ ಸೇರಿ ಆಹಾರ ಮತ್ತು ಇತರ ಪದಾರ್ಥಗಳನ್ನು ವಾರಾಟ ವಾಡುವವರಿಗೆ ರ‌್ಯಾಟ್‌ಟೆಸ್ಟ್ ವಾಡಿಸಬೇಕು. ಪ್ರತಿಯೊಬ್ಬರಿಗೂ ವಾಸ್ಕ್ ಕಡ್ಡಾಯಗೊಳಿಸಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾಗೆ ಸೂಚಿಸಿದರು.
ತಹಸೀಲ್ದಾರ್‌ಗಳೇ ಹೊಣೆ: ತಾಲೂಕುಗಳಲ್ಲಿ ಸೋಂಕಿತರ ಪ್ರವಾಣ ಹೆಚ್ಚಾದರೆ ತಹಸೀಲ್ದಾರ್‌ಗಳೇ ಹೊಣೆ. ಹಾಗಾಗಿ, ಉಳಿದೆಲ್ಲಾ ಕೆಲಸಗಳಿಗಿಂತ ಮೊದಲು ಕರೊನಾ ಕೆಲಸಕ್ಕೆ ಆದ್ಯತೆ ಕೊಡಬೇಕು. ಸೋಂಕಿತರ ಸಂಪರ್ಕಿತರನ್ನು ಗುರುತಿಸುವ ಪ್ರವಾಣ ಹೆಚ್ಚಾಗಬೇಕು. ತಾಲೂಕು ವೈದ್ಯಾಧಿಕಾರಿಗಳು ಯಾವುದೇ ಸಬೂಬು ಹೇಳದೆ ಸ್ಲ್ಯಾಬ್ ವಾದರಿ ಸಂಗ್ರಹವನ್ನು ಆಯಾ ದಿನದಂದೇ ಲ್ಯಾಬ್‌ಗಳಿಗೆ ಕಳಿಸಿಕೊಡಬೇಕು. ದಿನನಿತ್ಯದ ವಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ನಿರ್ದೇಶಿಸಿದರು.