ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮ ದಿನಾಚರಣೆ

cariyappa
Published on

ಮಡಿಕೇರಿ:

ಮಡಿಕೇರಿಯ ರೋಶನಾರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸಮಾಧಿ ಸ್ಥಳದಲ್ಲಿ ಮಂಗಳವಾರ ಕಾರ್ಯಪ್ಪ ಅವರ 126ನೇ ಜನ್ಮದಿನ ಆಚರಿಸಲಾಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಸೊಸೆ ಮೀನಾ ಕಾರ್ಯಪ್ಪ, ಪುತ್ರಿ ನಳಿನಿ ಕಾರ್ಯಪ್ಪ, ನಿವೃತ್ತ ಕರ್ನಲ್ ಬಿ.ಜಿ.ವಿ. ಕುಮಾರ್, ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ಸಿ.ಎಸ್. ಗುರುದತ್, ಪ್ರಾಂಶುಪಾಲೆ ಸುಮಿತ್ರಾ, ಆಡಳಿತಾಧಿಕಾರಿ ರವಿ , ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಪೊಲೀಸರು ಸೇರಿದಂತೆ ಗಣ್ಯರು ಕಾರ್ಯಪ್ಪ ಅವರ ಸಮಾಧಿ ಸ್ಥಳಕ್ಕೆ ಪುಷ್ಟ್ಪಾರ್ಚನೆ ಮೂಲಕ ಗೌರವ ಸಮರ್ಪಿಸಿದರು.

ಈ ಸಂದರ್ಭ ಮಾತನಾಡಿದ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ತನ್ನ ತಂದೆಗೆ ದೇಶವೇ ಸದಾ ಮೊದಲಾಗಿತ್ತು. ಕುಟುಂಬ, ಗೆಳೆಯರು ನಂತರದ ಸ್ಥಾನದಲ್ಲಿದ್ದರು. ಅವರು ಸೇನಾ ಜೀವನದಲ್ಲಿ ತೋರಿದ ಪ್ರಮಾಣಿಕತೆ, ಶಿಸ್ತಿನ ಗುಣಗಳೇ ಪ್ರತೀಯೋರ್ವ ಭಾರತೀಯನಿಗೂ ಮಾರ್ಗದರ್ಶಿಯಾಗಿರಬೇಕಾಗಿದೆ. ಉತ್ತಮ ಮನುಷ್ಯನಾಗಿ ಜೀವಿಸುವ ನಿಟ್ಟಿನಲ್ಲಿ ಪ್ರತೀಯೋರ್ವರು ಗಮನ ಕೇಂದ್ರೀಕರಿಸಿಕೊಳ್ಳಬೇಕು. ಆಗ ಅಂಥವರಿAದ ದೇಶಕ್ಕೂ ಒಳಿತಾಗುತ್ತದೆ. ತಂದೆಯವರು ನಿಧನರಾದ ಸಂದರ್ಭ ಮಡಿಕೇರಿಯ ಅವರ ಪ್ರೀತಿಯ ಸ್ಥಳ ರೋಶನಾರದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಅಂದಿನ ಸೇನಾಪಡೆ, ವಾಯುಪಡೆ, ನೌಕಾಪಡೆಗಳ ಮುಖ್ಯಸ್ಥರು ಇಲ್ಲಿಗೆ ಬಂದು ಅಂತಿಮ ಗೌರವ ನಮನ ಸಲ್ಲಿಸಿದ ಕ್ಷಣಗಳನ್ನು ನಂದಾ ಕಾರ್ಯಪ್ಪ ಸ್ಮರಿಸಿಕೊಂಡರು.

ಪಶ್ಚಿಮಘಟ್ಟ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರ ಎಂಬ ವಿಚಾರದ ಕುರಿತ ಪ್ರಬಂಧಕ್ಕಾಗಿ ಗೋಣಿಕೊಪ್ಪಲುವಿನ ನ್ಯಾಷನಲ್ ಅಕಾಡೆಮಿ ಶಾಲಾ ವಿದ್ಯಾರ್ಥಿ ಬಿ.ಎ. ಆದಿಲ್‌ಗೆ ಅತ್ಯುತ್ತಮ ಪ್ರಬಂಧಕ್ಕಾಗಿ ನೀಡಲಾಗುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಟ್ರೋಫಿಯನ್ನು ನಳಿನಿ ಕಾರ್ಯಪ್ಪ ವಿತರಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿನಿ ದಿಯಾ ಚೋಂದಮ್ಮ ದ್ವಿತೀಯ, ನಾಪೋಕ್ಲುವಿನ ಅಂಕುರ್ ಶಾಲಾ ವಿದ್ಯಾರ್ಥಿನಿ ಪಿ.ಎಂ. ಉಮ್ ಅಬಿಬಾ ತೃತೀಯ ಸ್ಥಾನ ಪಡೆದರು.

ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಶಿಕ್ಷಕಿಯರಾದ ಅಲೆಮಾಡ ಚಿತ್ರಾನಂಜಪ್ಪ, ಪ್ರತಿಮಾಶೇಟ್ ಮಾರ್ಗದರ್ಶನದಲ್ಲಿ ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ದೇಶಭಕ್ತಿಗೀತೆ, ಭಜನೆಗಳನ್ನು ಹಾಡುವ ಮೂಲಕ ಗಮನ ಸೆಳೆದರು. ಪೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತಾಗಿ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಸಮರ್ಥ್ ಚಂಗಪ್ಪ ಮಾತನಾಡಿದರೆ, ವಿದ್ಯಾರ್ಥಿಗಳು ಕಾರ್ಯಪ್ಪ ಅವರ ಜೀವನ ಮತ್ತು ಸೇನೆಯ ಸಂಬAಧಿತ ಧ್ಯೇಯವಾಕ್ಯಗಳನ್ನು ಪ್ರಸ್ತುತಪಡಿಸಿದರು.

ರಾಷ್ಟçದ ಪ್ರಥಮ ಸೇನಾ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಬಳಿಯೂ ಆಚರಿಸಲಾಯಿತು. ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್‌ಪಿ ಕೆ. ರಾಮರಾಜನ್, ಅಡಿಷನಲ್ ಎಸ್‌ಪಿ ಸುಂದರ್ ರಾಜ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಸೇರಿದಂತೆ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದು ಮಹಾನ್ ಸೇನಾನಿಗೆ ಗೌರವ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net