

ಬಾಳೆಹೊನ್ನೂರು: ಆಕಸ್ಮಿಕವಾಗಿ ಅಗ್ನಿ ಸಂಬಂಧಿತ ಅವಘಡಗಳು ಸಂಭವಿಸಿದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕೊಪ್ಪ ಅಗ್ನಿಶಾಮಕ ಠಾಣೆ ಅಧಿಕಾರಿ ಜೋಯ್ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಿ.ಕಣಬೂರು ಗ್ರಾಪಂ ಆವರಣದಲ್ಲಿ ನಡೆದ ಅಗ್ನಿಶಾಮಕ ಸೇವಾ ದಿನಾಚರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಕಿ ಅವಘಡಗಳು ಸಂಭವಿಸಿದಾಗ ಕೂಡಲೇ ಸ್ಥಳೀಯ ಅಗ್ನಿಶಾಮಕ ಠಾಣೆ ಅಥವಾ 112ಗೆ ಮಾಹಿತಿ ನೀಡಬೇಕು. ಈ ಮೂಲಕ ಬೆಂಕಿ ಅವಘಡ ಹೆಚ್ಚಾಗದಂತೆ ಮುಂಜಾಗ್ರತೆ ವಹಿಸಬೇಕು. ಸೀಮೆಎಣ್ಣೆ, ಪೆಟ್ರೋಲ್ ಅಥವಾ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರು ಹಾಕದೆ ಬೆಂಕಿ ನಂದಿಸಲು ಮರಳನ್ನು ಬಳಸಬೇಕು. ಹುಲ್ಲಿನೆ ಮೆದೆ, ಮನೆ, ಮರಗಳ ರಾಶಿಗೆ ಬೆಂಕಿ ಬಿದ್ದಾಗ ಮರಳು, ನೀರನ್ನು ಹಾಕಬೇಕು ಎಂದರು.
ವಿದ್ಯುತ್ ಒಲೆಗಳಲ್ಲಿ ಕೆಲಸ ಮಾಡುವಾಗ ಹಲಗೆ ಮೇಲೆ ನಿಂತು ಕೆಲಸ ಮಾಡಬೇಕು. ವಿದ್ಯುತ್ ಸಂಬಂಧಿತ ಬೆಂಕಿ ಅವಘಡ ನಡೆದಾಗ ನೀರನ್ನು ಬಳಸದೆ ಮೈನ್‌ಸ್ವಿಚ್ ಆ್ ಮಾಡಿ ಬೆಂಕಿ ನಂದಿಸಲು ಮರಳು, ಮಣ್ಣು ಬಳಸಬೇಕು.
ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪ್ರವೀಣ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಪ್ರಭಾಕರ್ ಪ್ರಣಸ್ವಿ, ಮಹಮ್ಮದ್ ಜುಹೇಬ್, ಆರೋಗ್ಯ ನಿರೀಕ್ಷಣಾಧಿಕಾರಿ ಭಗವಾನ್, ವಿನೋದ ಮತ್ತಿತರರು ಹಾಜರಿದ್ದರು.