ವೃತ್ತಿ ರಂಗಭೂಮಿ ಉಳಿವಿಗೆ ಯುವಜನತೆ ಶ್ರಮಿಸಲಿ

Career Theatre, Basavanbagewadi, Eranna Pattanashetty, Drama,
ಬಸವನಬಾಗೇವಾಡಿ ಪಟ್ಟಣದಲ್ಲಿ ‘ಮನಸ್ಸಿದ್ರ ಮಾರಿನೋಡು ನೆನಪಾದ್ರ ಪೋನ್ ಮಾಡು’ ಕೌಟುಂಬಿಕ ನಾಟಕವನ್ನು ಗಣ್ಯರು ಉದ್ಘಾಟಿಸಿದರು. ಈರಣ್ಣ ಪಟ್ಟಣಶೆಟ್ಟಿ, ಶಂಕರಗೌಡ ಬಿರಾದಾರ, ಶಿವಾನಂದ ಈರಕಾರ ಮುತ್ಯಾ, ಎಂ.ಜಿ.ಆದಿಗೊಂಡ, ಶೇಖರ ಗೊಳಸಂಗಿ ಇತರರಿದ್ದರು.
Published on

ಬಸವನಬಾಗೇವಾಡಿ: ಸಾಮಾಜಿಕ ಜಾಲತಾಣ ಅಬ್ಬರದಲ್ಲಿ ವೃತ್ತಿರಂಗಭೂಮಿ ನಶಿಸಿ ಹೋಗುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದಲ್ಲಿನ ಡಿಸಿಸಿ ಬ್ಯಾಂಕ್ ಎದುರುಗಡೆಯ ಗೌಡರ ಜಾಗದಲ್ಲಿ ಹಾಕಿರುವ ಗುರು ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರ ಕಂಪನಿಯ ಮಹೇಶ ಕಲ್ಲೋಳಿ ವಿರಚಿತ ನಾಟಕ ಮನಸ್ಸಿದ್ರ ಮಾರಿನೋಡು ನೆನಪಾದ್ರ ಪೋನ್ ಮಾಡು (ಹೌದ ಹುಲಿಯಾ) ಎಂಬ ಕೌಟಂಬಿಕ ನಾಟಕವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕ ಮತ್ತು ಚಲನಚಿತ್ರಗಳನ್ನು ನೋಡಿ ಅದರಲ್ಲಿನ ಉತ್ತಮ ಅಂಶಗಳಿಂದ ಪ್ರೇರಿತರಾಗಿ ಎಷ್ಟೋ ಜನರು ಸಾಧನೆ ಮಾಡಿದ ಉದಾಹರಣೆಗಳಿವೆ. ಆದರೆ ಸದ್ಯ ಸಾಮಾಜಿಕ ಜಾಲತಾಣದತ್ತ ಯುವಕರು ಮಾರುಹೋಗಿದ್ದರಿಂದ ಎಷ್ಟೋ ಕುಟುಂಬಗಳು ಹಾಳಾಗಿರುವ ಸಂಗತಿಗಳನ್ನು ಕಾಣುತ್ತಿದ್ದೇವೆ. ನಾಟಕ ಮತ್ತು ಸಿನಿಮಾಗಳಲ್ಲಿನ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ವೃತ್ತಿರಂಗಭೂಮಿ ಕಲಾವಿದರ ಬದುಕು ಸದ್ಯ ಕಷ್ಟಕರವಾಗಿದೆ. ಸರ್ಕಾರ ಅವರ ನೆರವಿಗೆ ಬರುವ ಜತೆಗೆ ತಾಲೂಕು ಮಟ್ಟದಲ್ಲಿ ರಂಗ ಮಂದಿರ ನಿರ್ಮಿಸಿದರೆ ಸಹಕಾರವಾಗುತ್ತದೆ. ಬಸವನಾಡಿನ ಜನರು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ಶಿವಾನಂದ ಈರಕಾರ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಜಿ.ಆದಿಗೊಂಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಸಂಗಮೇಶ ಓಲೇಕಾರ, ರವಿ ರಾಠೋಡ, ಶ್ರೀಕಾಂತ ಕೊಟ್ರಶೆಟ್ಟಿ, ಸಂಗಪ್ಪ ವಾಡೇದ, ಶಶಿಧರ ಕುಂಬಾರ, ದಯಾನಂದ ಜಾಲಗೇರಿ, ಕಾನಿಪ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಬೆಣ್ಣೂರ, ಮಂಜು ಕಲಾಲ, ಮನಾನ ಶಾಬಾದಿ, ದಯಾನಂದ ಜಾಲಗೇರಿ ಇತರರಿದ್ದರು. ಮಂಟೇಶ ದಂಡಿನ ಮಾತನಾಡಿದರು. ಕೊಟ್ರೇಶ ಹೆಗಡ್ಯಾಳ ಸ್ವಾಗತಿಸಿದರು. ಶಿವಾನಂದ ಮಡಿಕೇಶ್ವರ ನಿರೂಪಿಸಿದರು. ಎಚ್.ಬಿ. ಬಾರಿಕಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net