ವೃತ್ತಿ ಕೌಶಲ ಬೆಳೆಸಿಕೊಂಡು ಶ್ರೇಷ್ಠ ಉದ್ಯಮಿಗಳಾಗಿ

web 5
Published on

ಧಾರವಾಡ: ಸರ್ಕಾರದ ಹಣಕಾಸಿನ  ಸೌಲಭ್ಯಗಳನ್ನು ಬಳಸಿಕೊಂಡು ಸ್ವ ಉದ್ಯೋಗ ಮಾಡಲು ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳು ಉಪಯುಕ್ತ. ವೃತ್ತಿ  ಕೌಶಲ ಬೆಳೆಸಿಕೊಂಡು ಶ್ರೇಷ್ಠ ಉದ್ಯಮಿಗಳಾಗಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಶ್ರೀ ಮತ್ಯುಂಜಯ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ಉತ್ತಮ ಉದ್ಯೋಗಕ್ಕಾಗಿ ವೃತ್ತಿ ಮಾರ್ಗದರ್ಶನ ಕೌಶಲಾಭಿವೃದ್ಧಿ’ ವಿಷಯ ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನದ ಯುಗದಲ್ಲಿ ಟ್ಯಾಲಿಯಂಥ ಅನೇಕ ಸ್‌ಟಾವೇರ್‌ಗಳ ಬಗ್ಗೆ ಜ್ಞಾನ ಹೊಂದಿರಬೇಕು. ಭಾರತೀಯ ಸೇನೆಯಲ್ಲಿ ವಿಪುಲ  ಉದ್ಯೋಗಾವಕಾಶಗಳಿವೆ. ಅವುಗಳನ್ನು  ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ. ವಿ.ಐ. ಪಾಟೀಲ ಮಾತನಾಡಿ, ಖಾಸಗೀಕರಣ ಮತ್ತು ಜಾಗತೀಕರಣದ ಯುಗದಲ್ಲಿ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ವೃತ್ತಿ ಯೋಜನೆಗಳು ಕೌಶಲ್ಯ ಅಭಿವೃದ್ಧಿ ವಿಷಯ ಕುರಿತು ಡಾ. ರಘುನಾಥ ಕಡಕನೆ, ಸ್ವಂತ ಉದ್ಯೋಗಕ್ಕೆ ಸರ್ಕಾರದ ಹಣಕಾಸು ಸೌಲಭ್ಯಗಳು ಕುರಿತು ಸಿ.ಎಚ್. ಅಂಗಡಿ ವಿಷಯ ಮಂಡಿಸಿದರು.
ಸಂಯೋಜಕ ಪ್ರೊ. ಎಸ್.ಎಸ್. ಸಂಗೊಳ್ಳಿ, ಮಹೇಶ ಮಾಶಾಳ, ಪ್ರೊ. ಉಮೇಶ ನೀಲಪ್ಪನವರ, ಪ್ರೊ. ಸುಷ್ಮಾ ಶಿವಳ್ಳಿ, ಪ್ರೊ. ಶಶಿಧರ ಚಿಕ್ಕಮಠ, ಇತರರಿದ್ದರು.
ಪ್ರಾಚಾರ್ಯೆ ಡಾ. ನೀಲಕ್ಕ ಸಿ. ಪಾಟೀಲ ಸ್ವಾಗತಿಸಿದರು. ಪ್ರೊ. ವನಜಾಕ್ಷಿ ರೇವಡಿಗೇರ ನಿರೂಪಿಸಿದರು. ಪ್ರೊ. ಆಶಾ ನಿಡವಣಿ ವಂದಿಸಿದರು.
ಕಾರ್ಯಾಗಾರದಲ್ಲಿ ವಿವಿಧ ಕಾಲೇಜುಗಳ 210ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net