

ಹುಬ್ಬಳ್ಳಿ : ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರದಂದು ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅತಿಥಿಯಾಗಿದ್ದ ಧಾರವಾಡ ಐಐಟಿ ಡೀನ್ ಡಾ. ಶಿವಪ್ರಸಾದ ಸುನ್ನದಮಠ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ತನ್ನದೆ ಆದ ರೀತಿಯಲ್ಲಿ ಶ್ರೇಷ್ಠತೆ ಹೊಂದಿರುತ್ತಾನೆ. ಹಾಗಾಗಿ, ವಿದ್ಯಾಥಿಗಳು ತಮ್ಮ ವ್ಯಕ್ತಿತ್ವ ವಿಕಸನಕಕ್ಕೆ ಶ್ರಮವಹಿಸಿಬೇಕು ಎಂದು ತಿಳಿಸಿದರು.
ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಮೊದಲ ತಾಂತ್ರಿಕ ಅಧಿವೇಶನದ ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರೊ.
ಸಂಪನ್ಮೂಲ ವ್ಯಕ್ತಿ, ಹೆಚ್ಚುವರಿ ಅಡ್ವಕೇಟ್ ಜನರಲ್ ಗಂಗಾಧರ ಜೆ.ಎಂ. ಮಾತನಾಡಿ, ವಕೀಲ ವೃತ್ತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಸಿಂಡಿಕೇಟ್ ಸದಸ್ಯ ವಸಂತ ಲದ್ವ, ಡಾ. ಎಚ್.ವಿ. ಬೆಳಗಲಿ, ಕುಲಸಚಿವೆ ಅನುರಾಧಾ ವಸ್ತ್ರದ, ಪ್ರೊ. ರತ್ನಾ ಭರಮಗೌಡರ, ಡಾ. ಅನು ಪ್ರಸನ್ನನ್ ಹಾಗೂ ಇತರರು ಇದ್ದರು.