ವಿದ್ಯಾರ್ಥಿಗಳಿಗೆ ನಿರ್ಧಾರಿತ ಗುರಿ ತಲುಪಲು ಕೌಶಲ ಅಗತ್ಯ...

Indraali
Published on

ರೊ. ಡಾ.ಸುಧೀರ್​ ಅನಿಸಿಕೆ

ಇಂದ್ರಾಳಿ ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಏನಾಗಬೇಕೆನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ಈಗಿನಿಂದಲೇ ಆ ವೃತ್ತಿಗೆ ಸಂಬಂಧಪಟ್ಟ ಕೌಶಲ ಗಳಿಸಿಕೊಳ್ಳಬೇಕು. ಗುರಿ ಸಾಧನೆಗೆ ಕಠಿಣ ಶ್ರಮ ಅನುಸರಿಸಿ, ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಉಡುಪಿ ಜಿಲ್ಲಾ ರೋಟರಿ ಯೋಜನಾ ಕಾರ್ಯದರ್ಶಿ ರೊ. ಡಾ.ಸುಧೀರ್​ ಸಲಹೆ ನೀಡಿದರು.

ಇಂದ್ರಾಳಿ ಪ್ರೌಢಶಾಲೆಯಲ್ಲಿ ರೋಟರಿ ಉಡುಪಿ ಆಶ್ರಯದಲ್ಲಿ ಆಗಸ್ಟ್​ 8ರಂದು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭವಿಷ್ಯ ರೂಪಿಸಿಕೊಳ್ಳಿ

ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶಣೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಇಲ್ಲಿ ಲಭಿಸುವ ಉಪಯುಕ್ತ ಮಾಹಿತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರೊ. ಸೇಶಪ್ಪ ರೈ, ರೊ.ರಾಮಚಂದ್ರ ಉಪಾಧ್ಯ, ರೊ.ಶಶಿಧರ ಶೆಟ್ಟಿ ಎಚ್​., ರೊ.ಹೇಮಂತ ಯು. ಕಾಮತ, ರೊ.ನಿತ್ಯಾನಂದ ನಾಯಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ವಿನಾಯಕ ಕಿಣಿ. ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು, ರೋಟರಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೃತ್ತಿ ಮಾರ್ಗದರ್ಶನದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಉಡುಪಿ ಡಯಟ್​ನ ಪ್ರಭಾಕರ ಮಿತ್ಯಂತ, ರೊ.ಅಮಿತ್​ ಅರವಿಂದ, ರೊ.ಡಾ.ಕಲ್ಯ ಸುರೇಶ ಶಣೈ, ರವಿಪ್ರಸಾದ್​, ರೊ. ರೇಣು ಜಯರಾಂ, ಅಭಿನವ್​ ಗ್ರೋವರ್​, ಕೆ.ವಿನಾಯಕ ಕಿಣಿ ಉಪಯುಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿನಿಯರಾದ ವೈಷ್ಣವಿ, ಅಪೂರ್ವಾ, ರಕ್ಷಾ, ಪವಿತ್ರಾ ಪ್ರಾರ್ಥಿಸಿದರು. ಉಡುಪಿ ರೋಟರಿ ಅಧ್ಯಕ್ಷ ರೊ. ಸೂರಜಕುಮಾರ್​ ಸ್ವಾಗತಿಸಿದರು. ಕಾರ್ಯಕ್ರಮ ನಿಯೋಜಕ ರೊ.ಸುಬ್ರಹ್ಮಣ್ಯ ಬಾಸ್ರಿ ವಂದಿಸಿದರು. ರೊ.ಜನಾರ್ದನ ಭಟ್​ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net