ಯುವ ಸಂಪನ್ಮೂಲ ಬೆಳವಣಿಗೆ : ಜೇಮ್ಸ್ ಪೀಟರ್ ಡಿಸೋಜ ಹೇಳಿಕೆ

New Project (19)
Published on

ಮೂಲ್ಕಿ: ಯುವ ಸಂಪನ್ಮೂಲ ಬೆಳೆಸುವ ಹಾಗೂ ದೇಶದ ಅಭಿವೃದ್ಧಿಗಾಗಿ ನೀಡುವ ಉನ್ನತ ಯೋಜನೆಯಡಿ ಮೂಲ್ಕಿ ರೋಟರಿ ವೃತ್ತಿ ಮಾರ್ಗದರ್ಶನ ಶಿಬಿರ ಹಮ್ಮಿಕೊಂಡಿದೆ ಎಂದು ಮೂಲ್ಕಿ ರೋಟರಿ ಅಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜ ಹೇಳಿದರು.

ಮೂಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಮೂಲ್ಕಿ ಪರಿಸರದ ವಿದ್ಯಾರ್ಥಿಗಳಿಗಾಗಿ ಯುಪಿಎಸ್‌ಸಿ ಹಾಗೂ ವಿವಿಧ ಪ್ರತಿಭಾ ಪರೀಕ್ಷೆಗಳ ಬಗ್ಗೆ ವಿಶೇಷ ಮಾಹಿತಿ ಶಿಬಿರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಿಮಾಂಶು ಧೂಪಿಯಾ ಮತ್ತು ಸಂತೋಷ್ ಶೆಟ್ಟಿ ಮಾಹಿತಿ ನೀಡಿದರು. ಮೂಲ್ಕಿ ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್, ವಿಜಯ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಅರುಣ್ ಕುಮಾರ್ ಬಿ. ಮತ್ತು ರೋಟರಿ ಜಿಲ್ಲೆ 3181 ವಲಯ 1 ವಲಯ ಲೆಫ್ಟಿನೆಂಟ್ ಭುಜಂಗ ಕವತ್ತಾರ್ ಅತಿಥಿಗಳಾಗಿದ್ದರು.

ಜೇಮ್ಸ್ ಪೀಟರ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ರೋಷನ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಭಾನುಮತಿ ಶೆಟ್ಟಿ ವಂದಿಸಿದರು. ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೂಲ್ಕಿ ಪರಿಸರದ 350 ವಿದ್ಯಾರ್ಥಿಗಳು ಪ್ರಯೋಜನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net