ಕರಿಯರ್ ಅಕಾಡೆಮಿ ಮಾಲೀಕನಿಗೆ ಚೂರಿ ಇರಿತ

WhatsApp Image 2024-07-18 at 3.29.14 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಣ ನೀಡಲು ಒಪ್ಪದ ಕೋಚಿಂಗ್ ಸೆಂಟರ್ ಮಾಲೀಕನಿಗೆ ವಿದ್ಯಾರ್ಥಿಯೊಬ್ಬ ಚಾಕು ಇರಿದ ಘಟನೆ ಸಪ್ತಾಪುರದಲ್ಲಿ ಗುರುವಾರ ಸಂಜೆ ನಡೆದಿದೆ. ಕಲಬುರಗಿ ಮೂಲದ ಬೀರಪ್ಪ ಎಂಬ ವಿದ್ಯಾರ್ಥಿ ಸೂರ್ತಿ ಕರಿಯರ್ ಅಕಾಡೆಮಿ ಮಾಲೀಕ ರಮೇಶ ಕಾಖಂಡಕಿ ಅವರಿಗೆ ಚಾಕು ಇರಿದಿದ್ದಾನೆ. ಬೀರಪ್ಪ ಕೋಚಿಂಗ್‌ಗೆ ಸೇರುವ ಮೊದಲು ರಮೇಶ ಅವರಿಗೆ 40 ಸಾವಿರ ರೂಪಾಯಿ ನೀಡಿದ್ದ. ಆ ಪೈಕಿ 2,000 ರೂಪಯಿ ನೀಡುವಂತೆ ಬೀರಪ್ಪ ಕೇಳಿದ್ದ. ಆದರೆ, ರಮೇಶ ಅವರು ನಾಳೆ ಬೆಳಗ್ಗೆ ಹಣ ಕೊಡುವುದಾಗಿ ಹೇಳಿದ್ದರಿಂದ ಕೋಪಗೊಂಡ ಬೀರಪ್ಪ, ರಮೇಶ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯÁಗಿದ್ದಾನೆ. ಸದ್ಯ ರಮೇಶ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net