ಕರಿಯರ್ ಅಕಾಡೆಮಿಯಲ್ಲಿ ಎಲ್ಲ ವರ್ಗದ ಜನರಿಗೂ ಅವಕಾಶ

Training Session Innagaration
Published on

ಕುಮಟಾ: ಗ್ರಾಮ ಒಕ್ಕಲು ಕರಿಯರ್ ಅಕಾಡೆಮಿ ಕೇವಲ ಗ್ರಾಮ ಒಕ್ಕಲಿಗರಿಗೆ ಮಾತ್ರ ಸೀಮಿತವಾಗಿರದೆ ಸಮಾಜದ ಎಲ್ಲ ವರ್ಗದ ಜನರಿಗೂ ಅವಕಾಶ ನೀಡಲಾಗಿದೆ.

ಇದು ಗ್ರಾಮ ಒಕ್ಕಲು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್​ನ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಸಮಾಜದ ಎಲ್ಲ ವರ್ಗದ ಜನರು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದುವರಿಯಲು ಸಹಾಯವಾಗುತ್ತದೆ ಎಂದು ಆದಿಚುಂಚನಗಿರಿ ಮಿರ್ಜಾನ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ಗ್ರಾಮ ಒಕ್ಕಲು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಾಮ ಒಕ್ಕಲು ಕರಿಯರ್ ಅಕಾಡೆಮಿ ಆಶ್ರಯದಲ್ಲಿ ಮಣಕಿ ಗ್ರಾಮ ಒಕ್ಕಲು ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಔದ್ಯೋಗಿಕ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಒಕ್ಕಲು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್​ನ ಅಧ್ಯಕ್ಷ ಆರ್.ಎನ್. ಪಟಗಾರ ಮಾತನಾಡಿ, ಬಹುದಿನಗಳ ಕನಸಾದ ಗ್ರಾಮ ಒಕ್ಕಲು ಕರಿಯರ್ ಅಕಾಡೆಮಿಗೆ ಪೂರಕ ಸಲಕರಣೆಗಳನ್ನು, ಪಠ್ಯಪುಸ್ತಕಗಳನ್ನು ಒದಗಿಸಿ ತರಬೇತಿಗೆ ಸಹಕರಿಸಿದ ಸಮಾಜದ ಶಿಕ್ಷಣ ಅಭಿಮಾನಿಗಳು ಕೃತಜ್ಞತೆಗೆ ಪಾತ್ರರು ಎಂದರು.

ಬೆಂಗಳೂರಿನ ಡಾ. ಹನಿಯೂರು ಚಂದ್ರೇಗೌಡ, ಬೆಂಗಳೂರಿನ ಮಂಜುಶ್ರೀ ಟೆಕ್ನೋ ಪ್ಯಾಕ್ ಲಿಮಿಟೆಡ್ ಉಪಾಧ್ಯಕ್ಷ ಸತ್ಯಾನಂದ ಪಟಗಾರ, ಪಿಡಿಒ ಶ್ರೀಧರ ಪಟಗಾರ, ಗ್ರಾಮ ಒಕ್ಕಲಿಗ ಸಮುದಾಯ ಭವನದ ಅಧ್ಯಕ್ಷ ಮಂಜುನಾಥ ಪಟಗಾರ, ವಕೀಲ ವಿನಾಯಕ ಪಟಗಾರ, ಹೊನ್ನಾವರ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ಟ್ರಸ್ಟಿ ಸಿ.ಎಂ. ಪಟಗಾರ, ಜಿಲ್ಲಾ ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಪಟಗಾರ ಇದ್ದರು.

ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಯೋಗೇಶ ಪಟಗಾರ ಸ್ವಾಗತಿಸಿದರು. ಗಣಪತಿ ಪಟಗಾರ ಊರಕೇರಿ ನಿರೂಪಿಸಿದರು. ಪುರೂರವ ಪಟಗಾರ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಹನಿಯೂರು ಚಂದ್ರೇಗೌಡ, ಶ್ರೀಧರ ಪಟಗಾರ, ಸತ್ಯಾನಂದ ಪಟಗಾರ, ಧಾರವಾಡದ ಗುರುದೇವ ಐಎಎಸ್-ಕೆಎಎಸ್ ಅಕಾಡೆಮಿ ಉಪನ್ಯಾಸಕ ಸತೀಶ ಪಾಟೀಲ, ಉದಯಕುಮಾರ್ ಎಚ್.ಪಿ. ತರಬೇತಿ ನಡೆಸಿಕೊಟ್ಟರು. ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿಯ ಪ್ರಯೋಜನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net