

ಕುಡಚಿ: ಕನ್ನಡ ರಾಜ್ಯೋತ್ಸವವನ್ನು ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಸಂಘಟನೆಯವರು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಉಪತಹಸೀಲ್ದಾರ್ ಅಭಿಷೇಕ ಬೊಂಗಾಳೆ ತಿಳಿಸಿದರು.
ಪಟ್ಟಣದ ಉಪ ತಹಸೀಲ್ದಾರ್ ಕಾರ್ಯಾಲ ಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮೆರವಣಿಗೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಹಮಿದೋದ್ದಿನ್ ರೋಹಿಲೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಮಿನ ವಾಟೆ ಮಾತನಾಡಿದರು. ಸಿಆರ್‌ಪಿ ಐ.ಎ.ಉಮರಖಾನ್, ಶಿವಪ್ಪ ಗಸ್ತಿ, ಬೀರಪ್ಪ ನರಟ್ಟಿ, ಬಾಬಾಸಾಹೇಬ ಮಾನೆ, ವೈ.ಕೆ.ಹೇಳವರ, ಎಸ್.ಬಿ.ಕದಂ, ಜೈಕುಮಾರ ಸನದಿ, ಸುಲ್ತಾನ ವಾಟೆ, ಪ್ರಸಾದ ಶಿಂಗೆ ಇತರರಿದ್ದರು.