ಕಲಿಕೆಯಲ್ಲಿ ಹಿಂದುಳಿಯದಂತೆ ಜಾಗ್ರತೆ ಅಗತ್ಯ

h26-aryan school
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಆರ್ಯನ್ಸ್ ಪಬ್ಲಿಕ್ ಶಾಲೆಯಲ್ಲಿ ಸೆಕೆಂಡರಿ ಶಾಲಾ ಮಟ್ಟದ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಸಿಬಿಎಸ್‌ಇ ತರಬೇತಿ ಶಿಬಿರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಶಿಕ್ಷಕರಾದ ಮಂಜುನಾಥ ಮಣವಿ, ಅನು ಮಾಸ್ಕರಾ ಮಾತನಾಡಿ, ಮಕ್ಕಳ ಸಾಮರ್ಥ್ಯ ಅರಿತು ಪಠ್ಯ ಚಟುವಟಿಕೆ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಬೇಕು. ಇದಕ್ಕೆ ಆಗಾಗ ನಡೆಸುವ ಮೌಲ್ಯಮಾಪನವೇ ಆಧಾರ. ಇದರಲ್ಲಿಯೂ ನವೀನ ವಿಧಾನಗಳಿವೆ ಎಂದರು.

ಶಿಬಿರವು ಬಹುಮಟ್ಟಿಗೆ ಸಂವಾದಾತ್ಮಕವಾಗಿದ್ದವು. ಗುಂಪು ಚಟುವಟಿಕೆಗಳು, ಪ್ರಾಯೋಗಿಕ ಪ್ರದರ್ಶನ ಮತ್ತು ಅರ್ಥಪೂರ್ಣ ಚರ್ಚೆಗಳು ನಡೆದವು.

ಶಾಲೆ ಅಧ್ಯಕ್ಷ ರಮೇಶ ಬಾಫಣಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net