

ಕೂಡ್ಲಿಗಿ: ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಪರಿಸರ ಪ್ರೇಮ ಮೆರೆಯಬೇಕು ಎಂದು ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಹೇಳಿದರು.
ಪರಿಸರ ದಿನಾಚರಣೆ ನಿಮಿತ್ತ ಗ್ರಾಮದ ನಾಡಕಚೇರಿಯಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಕಾಪಾಡುವಲ್ಲಿ ಯುವಕರು ಹೆಚ್ಚಿನ ಕಾಳಜಿ ತೋರಬೇಕು. ಸಸಿಗಳನ್ನು ನೆಟ್ಟು ಮಗುವಿನಂತೆ ಪೋಷಣೆ ಮಾಡಿ ಬೆಳೆಸಬೇಕು. ಅವು ದೊಡ್ಡ ಮರವಾಗಿ ಗಾಳಿ, ನೆರಳು ಮತ್ತು ಹಣ್ಣು ನೀಡಲಿವೆ. ವೃಕ್ಷಗಳ ಮಹತ್ವ ಅರಿತು ಗಿಡಮರ ಬೆಳೆಸಬೇಕು ಎಂದು ಸಲಹೆ ನೀಡಿದರು.
ಅರಣ್ಯ ರಕ್ಷಕ ವೆಂಕಟೇಶ್ ಮಾತನಾಡಿದರು. ಗ್ರಾಪಂ ಸದಸ್ಯರಾದ ಎನ್.ಪ್ರಭಾಕರ್, ಪೇಂಟ್ ತಿಪ್ಪೇಸ್ವಾಮಿ, ತಳವಾರ್ ಪ್ರದೀಪ್ ಹಾಗೂ ಪ್ರಮುಖರಾದ ಶ್ರೀಧರ್, ರಹಮತ್, ಕೃಷ್ಣಮೂರ್ತಿ, ರಾಮಾಂಜನಿ, ಪ್ರಕಾಶ್, ಟಿ.ಎನ್.ರಮೇಶ್, ತಿಪ್ಪೇಸ್ವಾಮಿ, ಕೃಷ್ಣಪ್ಪ, ವೆಂಕಟೇಶ್, ಓಬಳೇಶ್, ಮಾರೇಶ್, ಕೃಷ್ಣ, ಉಮೇಶ್, ಚಂದ್ರಪ್ಪ ಇತರರಿದ್ದರು.