ಕಾರ್ಮಿಕ ವರ್ಗದ ಬಗ್ಗೆ ಕಾಳಜಿ ವಹಿಸಿ

Care about the working class
ಮಹಾಲಿಂಗಪುರದ ಜಯಲಕ್ಷ್ಮೀ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಕೇಂದ್ರ ಕಚೇರಿಯ ವಾರ್ಷಿಕೋತ್ಸವ ಮತ್ತು ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ನಿವೃತ್ತ ಶಿರಸ್ತೇದಾರ್ ಶಶಿಕಾಂತ ಕಾಂಬಳೆ ಉದ್ಘಾಟಿಸಿದರು. ಶಿವಲಿಂಗ ಟಿರಕಿ, ಸೋಮು ಮರೆಗುದ್ದಿ, ರಾಜೇಂದ್ರ ಮಿರ್ಜಿ, ಸಂಗಪ್ಪ ಉದಗಟ್ಟಿ ಇದ್ದರು.
Published on

ಮಹಾಲಿಂಗಪುರ: ದೇಶಾದ್ಯಂತ ಶೇ.85 ರಷ್ಟು ಕಾರ್ಮಿಕ ವರ್ಗವಿದೆ. ಸರ್ಕಾರಗಳು ಕಾರ್ಮಿಕ ವರ್ಗದ ಬಗ್ಗೆ ಕಾಳಜಿ ವಹಿಸಿ ಯಾವುದೇ ತಾರತಮ್ಯ ಮಾಡದೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ನಿವೃತ್ತ ಶಿರಸ್ತೇದಾರ್ ಶಶಿಕಾಂತ ಕಾಂಬಳೆ ಹೇಳಿದರು.

ಸ್ಥಳೀಯ ಜಯಲಕ್ಷ್ಮೀ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಕೇಂದ್ರ ಕಚೇರಿ ವಾರ್ಷಿಕೋತ್ಸವ ಮತ್ತು ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕ ವರ್ಗದ ಸಮಸ್ಯೆಗಳಿಗೆ ಸರ್ಕಾರ ನಿರಂತರವಾಗಿ ಸ್ಪಂದಿಸಬೇಕು ಎಂದರು.

ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಸಂಘಟನೆ ಇಂದು ನಿರಂತರವಾದ ಹೋರಾಟಗಳ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಗಮನ ಸೆಳೆದಿದೆ. ಸಂಘಟನೆಯನ್ನು ಗಟ್ಟಿಗೊಳಿಸಿ ಹೋರಾಟ ಮಾಡುವ ಮೂಲಕ ನಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳಲಾಗುವುದು. ಕಟ್ಟಡ ಕಾರ್ಮಿಕ ಮಾದರಿಯ ಕಾರ್ಮಿಕ ಸೌಲಭ್ಯಗಳನ್ನು ನೇಕಾರರಿಗೂ ಜಾರಿ ಮಾಡಿ ಗುರುತಿನ ಚೀಟಿಗಳನ್ನು ಹಂಚಿಕೆ ಮಾಡಬೇಕು. ಕೇಂದ್ರ ಸರ್ಕಾರ ಕನಿಷ್ಠ ವೇತನ ನೀತಿ ಜಾರಿಗೆ ತಂದಿದ್ದು, ಅದರಲ್ಲಿ ನೇಕಾರರನ್ನು ಬಿಡಲಾಗಿದೆ. ಈ ಕುರಿತು ಮೇ 28 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಹಾಗೂ ರಾಜ್ಯದ ಎಲ್ಲ ನೇಕಾರರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.

ನೇಕಾರ ಮುಖಂಡರಾದ ರಾಜೇಂದ್ರ ಮಿರ್ಜಿ, ಸಂಗಪ್ಪ ಉದಗಟ್ಟಿ ಮಾತನಾಡಿದರು.

ನೇಕಾರ ಧುರೀಣರಾದ ಸೋಮು ಮರೆಗುದ್ದಿ, ಗಂಗಪ್ಪ ಒಂಟಗೋಡಿ, ರಮೇಶ ಸೊರಗಾವಿ, ರಾಘು ಬೆಳಗಲಿ, ರಾಜು ಕುಕ್ಕುಗೊಳ್, ಮಲ್ಲಪ್ಪ ಮಿರ್ಜಿ, ರಾಜು ಬೆಳಗಲಿ, ಸದಾಶಿವ ಬರಗಿ, ರಮೇಶ ನಾಗರಾಳ, ಶಿವಾನಂದ ಮುರಗೋಡ, ರುದ್ರಪ್ಪ ಮುತ್ತೂರ, ಕಾಡಪ್ಪ ಯಡಪ್ಪನವರ, ಅಶೋಕ ಚಮಕೇರಿ, ಗಿರಿಮಲ್ಲಪ್ಪ ಕೈಸೋಲಗಿ, ಆನಂದ ಪಂಕಿ, ಮಹೇಶ ದೊಡಮನಿ, ಶಿವಾನಂದ ಬಸಪ್ಪಗೊಳ, ಬಸವರಾಜ ಜಮಖಂಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net