ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ವಿತರಣೆ

CARD NEW
Published on

ಹುಬ್ಬಳ್ಳಿ : ಇಲ್ಲಿನ ಕಿಮ್್ಸ ಆಸ್ಪತ್ರೆಯಲ್ಲಿ ಗುರುವಾರದಂದು ಅಂಗವಿಕಲರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್ ವಿತರಿಸುವ ಮಾಸಾಚರಣೆ ಏರ್ಪಡಿಸಲಾಗಿತ್ತು.

ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ ಕೆ. ಮಾತನಾಡಿ, ಎಲ್ಲ ಅಂಗವಿಕಲರಿಗೆ ಯುಡಿಐಡಿ ಕಾರ್ಡ್​ಗಳನ್ನು ಆಗಷ್ಟ್​ನಲ್ಲಿ ಮನೆ ಬಾಗಿಲಿಗೆ ಒದಗಿಸಲಾಗುವುದು. ಯುಡಿಐಡಿ ಕಾರ್ಡ್​ನಿಂದ ಸರ್ಕಾರದ ಹಲವಾರು ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕಿಮ್ಸ್ ಆಸ್ಪತ್ರೆಯ ಯುಡಿಐಡಿ ನೋಡಲ್ ಅಧಿಕಾರಿ ಡಾ.ಮಧುಚಂದ್ರ ಅವರು, ಯುಡಿಐಡಿ ಕಾರ್ಡ್ ಬಗ್ಗೆ ವಿವರ ನೀಡಿದರು.

ಡಾ. ರವೀಂದ್ರ ಗದಗ ಅವರು, ಶ್ರವಣ ದೋಷವುಳ್ಳವರಿಗೆ ಯುಡಿಐಡಿ ಕಾರ್ಡ್ ವಿತರಿಸುವ ಕುರಿತು ಮಾತನಾಡಿದರು.

ಚಂದ್ರಶೇಖರ, ಡಾ.ಆನಂದ ವಮಾ, ಎಂಆರ್​ಡಬ್ಲೂ ಮಹಾಂತೇಶ ಕುರ್ತಕೋಟಿ, ಫಲಾನುಭವಿಗಳು ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net