4 ಕೋಟಿ ರೂ.ವೆಚ್ಚದಲ್ಲಿ ದ್ಯಾವಮ್ಮ ಗುಡಿ ನಿರ್ಮಾಣ

Bhoomipuja
ಕಾರಟಗಿಯಲ್ಲಿ ದ್ಯಾವಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಗಣ್ಯರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಮಾಜಿ ಸಚಿವ ಸಾಲೋಣಿ ನಾಗಪ್ಪ, ಮುಖಂಡರಾದ ಶಿವರೆಡ್ಡಿ ನಾಯಕ, ಗೋವಿಂದಪ್ಪ ಶೆಟ್ಟಿ, ಮೋಹನ್ ರಾವ್, ಆರ್.ಜಿ.ಶ್ರೀನಿವಾಸ್, ನಾಗಪ್ಪ ಯರಡೋಣ, ಪಂಪನಗೌಡ ಬೂದಗುಂಪ, ಮಲ್ಲಿಕಾರ್ಜುನ ಸ್ವಾಮಿ, ಗದ್ದೆಪ್ಪ ನಾಯಕ, ಹನುಮಂತಪ್ಪ ಸಿಂಗಾಪುರ್ ಇದ್ದರು.
Published on

ಕಾರಟಗಿ: ಪಟ್ಟಣದ ಆರಾಧ್ಯ ದೈವ ಹಾಗೂ ಗ್ರಾಮ ದೇವತೆ ದ್ಯಾವಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಶುಕ್ರವಾರ ಗಣ್ಯರು ಭೂಮಿಪೂಜೆ ನೆರವೇರಿಸಿದರು.

ಮಾಜಿ ಸಚಿವ ಸಾಲೋಣಿ ನಾಗಪ್ಪ ಮಾತನಾಡಿ, ಮಂದಿರ ನಿರ್ಮಾಣಕ್ಕೆ ಪಟ್ಟಣದ ಸರ್ವ ಸಮುದಾಯವರು ಹಾಗೂ ಉದ್ಯಮಿಗಳು, ದಾನಿಗಳು ಸೇರಿ ಇತರರು ತಮ್ಮ ಕೈಲಾದ ಕಾಣಿಕೆ ನೀಡಿದ್ದಾರೆ. ಹೀಗಾಗಿ ಶುಭದಿನದಂದು ಅರ್ಚಕರಿಂದ ಭೂಮಿಪೂಜೆ ನೆರವೇರಿಸಲಾಗಿದೆ. 4 ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ.

ಮುರುಡೇಶ್ವರದ ಶಿಲ್ಪಿಗಳಿಗೆ ದೇವಸ್ಥಾನ ನಿರ್ಮಾಣ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ಮಸಬಹಂಚಿನಾಳ, ರಾಯಚೂರು ಜಿಲ್ಲೆ ಸಿರಗುಪ್ಪ ತಾಲೂಕಿನ ಹಳೇಕೋಟೆ ವೀರಭದ್ರೇಶ್ವರ ದೇವಸ್ಥಾನ ಹಾಗೂ ಆಂಧ್ರಪ್ರದೇಶದಲ್ಲಿನ ಮಂದಿರಗಳನ್ನು ವೀಕ್ಷಿಸಿ, ದೇವಸ್ಥಾನ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಅಚ್ಚುಕಟ್ಟಾಗಿ ತಾಯಿಯ ದೇವಸ್ಥಾನ ನಿರ್ಮಾಣವಾಗಲಿದೆ.

ಮಂದಿರ ನಿರ್ಮಾಣಕ್ಕೆ ದಾನಿಯೊಬ್ಬರು ಜಾಗ ನೀಡಿದ್ದಾರೆ. ಸಚಿವರಿಗೆ ಈಗಾಗಲೇ ಈ ಬಗ್ಗೆ ತಿಳಿಸಲಾಗಿದೆ. ಸರ್ವರೂ ಜತೆಗೂಡಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ. ಇದರಲ್ಲಿ ಭೇದ-ಭಾವ ಬೇಡ. ಗ್ರಾಮ ದೇವತೆ ಮಂದಿರ ನಿರ್ಮಾಣ ಕಾರ್ಯವನ್ನು ಖುಷಿಯಿಂದ ಮಾಡಬೇಕಿದೆ. ಮಂದಿರ ನಿರ್ಮಾಣಕ್ಕೆ ಪಟ್ಟಣದ ಸರ್ವರ ಸಹಕಾರ ಮುಖ್ಯವಾಗಿದೆ ಎಂದರು.

ಮುಖಂಡರಾದ ಶಿವರೆಡ್ಡಿ ನಾಯಕ, ಗೋವಿಂದಪ್ಪ ಶೆಟ್ಟಿ, ಮೋಹನ್ ರಾವ್, ಆರ್.ಜಿ.ಶ್ರೀನಿವಾಸ್, ನಾಗಪ್ಪ ಯರಡೋಣ, ಪಂಪನಗೌಡ ಬೂದಗುಂಪ, ಮಲ್ಲಿಕಾರ್ಜುನ ಸ್ವಾಮಿ, ಗದ್ದೆಪ್ಪ ನಾಯಕ, ಹನುಮಂತಪ್ಪ ಸಿಂಗಾಪುರ್, ನಾಗರಾಜ ಬಿಲ್ಗಾರ್, ಅಯ್ಯಪ್ಪ ಉಪ್ಪಾರ್, ನಾಗರಾಜ ಅರಳಿ, ಕಾಶೀನಾಥ್ ಕಂಪ್ಲಿ, ವೆಂಕೋಜಿ ಮರಾಠ, ವಿಠ್ಠಲ್ ಶೇಟ್, ಪ್ರಹ್ಲಾದ್ ಜೋಷಿ, ನಾರಾಯಣ ಈಡಿಗೇರ್, ಗಂಗಪ್ಪ ಛಲುವಾದಿ, ಬಸವರಾಜ ಎತ್ತಿನಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net