

Lamborghini Aventador: 9 ಕೋಟಿ ಮೌಲ್ಯದ ಲ್ಯಾಂಬೋರ್ಘಿನಿ ಅವೆಂಟಡಾರ್ ಐಷರಾಮಿ ಕಾರೊಂದು ಶನಿವಾರ (ಆ.02) ರಂದು ನಡುರಸ್ತೆಯಲ್ಲಿ ಹೊತ್ತಿಯುರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ನಡೆಯುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಕಾರಿನ ಮಾಲೀಕ ಇನ್ಸ್ಟಾಗ್ರಾಮ್ನಲ್ಲಿ ನಿಮ್ಮ ಮಗ ಸಂಜು ಎಂದು ಜನಪ್ರಿಯವಾಗಿರುವ ಸಂಜೀವ್ ಅವರದ್ದು ಎಂದು ತಿಳಿದುಬಂದಿದಿದೆ.
ಕಿತ್ತಳೆ ಬಣ್ಣದ ಐಷಾರಾಮಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಹಿಂಭಾಗದಿಂದ ಹೊಗೆ ಬರುತ್ತಿದೆ. ಇನ್ನು ಕಾರು ಮಾಲೀಕನಿಗೆ ಸಹಾಯ ಮಾಡಲು ಅಲ್ಲಿನ ಸ್ಥಳೀಯರು ಆಗಮಿಸಿ, ಅಗ್ನಿ ಶಾಮಕ ಯಂತ್ರವನ್ನು ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.
ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಆರಂಭಿಕ ವರದಿಗಳಲ್ಲಿ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಸೂಚಿಸಿದ್ದವು. ಆದರೆ, ಸಂಜೀವ್ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸೃಷ್ಟೀಕರಣವನ್ನು ಪೋಸ್ಟ್ ಮಾಡಿ ಅಲ್ಪ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಬೆಂಕಿಗೆ ನಿಖರವಾದ ಕಾರಣ ಏನೆಂದು ಅಧಿಕಾರಿಗಳು ಇನ್ನೂ ಧೃಢಪಡಿಸಿಲ್ಲ. ಈ ರೀತಿಯ ಐಷರಾಮಿ ಕಾರುಗಳು ಗಂಟೆಗೆ 300 ಕಿಮೀ. ಹೆಚ್ಚಿನ ವೇಗವನ್ನು ತಲುಪಬಲ್ಲವು, ಅವುಗಳ ಎಂಜಿನ್ಗಳು ಹಿಂಭಾಗದಲ್ಲಿರುವುದರಿಂದ ಅಧಿಕ ಬಿಸಿಯಾಗುವುದರಿಂದ ಅಪಾಯಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. (ಏಜೆನ್ಸೀಸ್)