ಕಾರು ಗೆದ್ದಿರುವ ನೆಪ ಹೇಳಿ 2.36 ಲಕ್ಷ ರೂ. ವಂಚನೆ

Cibra
Published on

ಹಾವೇರಿ: ಹರ್ಬಲ್ ಆಯುರ್ವೇದಿಕ್ ಕಂಪನಿಯಿಂದ ನಿಮಗೆ ಸ್ವಿಪ್ಟ್ ಡಿಸೈರ್ ಆರು ಗೆದ್ದಿದ್ದು, ಅದನ್ನು ಪಡೆಯಲು ವಿವಿಧ ಜಾರ್ಜಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬನಿಗೆ 2.36 ಲಕ್ಷ ರೂ. ಮೋಸ ಮಾಡಿರುವ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಗುತ್ತಲ ತಾಂಡಾದ ಮಂಜುನಾಥ ಪುಟ್ಟಪ್ಪ ನಾಯಕ (21) ಮೋಸ ಹೋದ ಯುವಕ.
ಈತನಿಗೆ ಅಮಿತ್‌ಕುಮಾರ ಎಂಬುವನು ಫೋನ್ ಮಾಡಿ ನೀವು ಹರ್ಬಲ್ ಆಯುರ್ವೇದಿಕ್ ಕಂಪನಿಯಿಂದ 8.60 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಡಿಸೈರ್ ಕಾರನ್ನು ಗೆದಿದ್ದೀರಿ. ಅದನ್ನು ನಿಮಗೆ ತಲುಪಿಸಲು ವಿವಿಧ ಜಾರ್ಜಸ್‌ಗಾಗಿ 2.36 ಲಕ್ಷ ರೂ. ಕೊಡಬೇಕು ಎಂದು ಹೇಳಿದ್ದಾನೆ. ಅದರಂತೆ ಮಂಜುನಾಥ ತನ್ನ ಖಾತೆ ಮೂಲಕ ಹಣ ನೀಡಿದ್ದಾನೆ. ಆದರೆ, ಹಣ ಪಡೆದ ಅಮಿತ್‌ಕುಮಾರ ವಾಪಸ್ ಕಾರು ನೀಡದೆ ಹಾಗೂ ಹಣವೂ ಮರಳಿಸದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net