ಕಾರಿನ ಕಿಟಕಿ ಒಡೆದು ಹಣ ಇಟ್ಟಿದ್ದ ಬ್ಯಾಗ್​ ಲೂಟಿ

Thief
Published on

ಬ್ಯಾಡಗಿ: ಕಾರಿನ ಕಿಟಕಿಯ ಗ್ಲಾಸ್​ ಒಡೆದು 1.15 ಲಕ್ಷ ರೂ. ಇಟ್ಟಿದ್ದ ವೇನಿಟಿ ಬ್ಯಾಗ್​ಅನ್ನು ಯಾರೋ ದೋಚಿರುವ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಬಳಿ ನಡೆದಿದೆ.

ಮುಂಡಗೋಡ ನಿವಾಸಿ ಶಾಂತೇಶಕುಮಾರ ಬಸಪ್ಪ ಬೆನಕನಕೊಪ್ಪ (47) ಎಂಬುವರ ಕಾರಿನಲ್ಲಿದ್ದ ಬ್ಯಾಗ್​ ಕಳ್ಳತನ ಮಾಡಿರುವುದು.

ಇವರು ದೇವಸ್ಥಾನದ ಬಳಿ ಕಾರಿಟ್ಟು ದರ್ಶನಕ್ಕೆ ತೆರಳಿದ್ದರು. ಈ ಸಮಯದಲ್ಲಿ ಯಾರೋ ದುಷ್ಕಮಿರ್ಗಳು ಕಾರಿನ ಗ್ಲಾಸ್​ ಪಡೆದು ವೇನಿಟಿ ಬ್ಯಾಗ್​ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net