ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್, ಐಫೋನ್ ಕಳವು

toyota vellfire car (1)
Published on

ಮೈಸೂರು: ನಗರದ ಎಂ.ಜಿ. ರಸ್ತೆಯಲ್ಲಿ ಇತ್ತೀಚೆಗೆ ಪ್ರವಾಸಿಗರೊಬ್ಬರ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಹಾಗೂ ಐಫೋನ್ ಕಳವು ಮಾಡ ಲಾಗಿದೆ.

ಬೆಂಗಳೂರಿನ ಹೆಬ್ಬಾಳ್ ನಿವಾಸಿ ರತ್ನಪ್ರಕಾಶ್ ಪಿಳ್ಳೆ(32) ಲ್ಯಾಪ್ಟಾಪ್ ಹಾಗೂ ಐಫೋನ್ ಕಳೆದುಕೊಂಡವರು. ರತ್ನಪ್ರಕಾಶ್ ಪಿಳ್ಳೆ ಕುಟುಂಬ ಸಹಿತ ಊಟಿಗೆ ಪ್ರವಾಶಕ್ಕೆ ತೆರಳಿ ನಗರಕ್ಕೆ ಡಿ.27 ರಂದು ಆಗಮಿಸಿದ್ದರು. ಎಂ.ಜಿ. ರಸ್ತೆಯ ಹೋಟೆಲ್‌ವೊಂದರಲ್ಲಿ ಊಟ ಮಾಡುವ ಸಲುವಾಗಿ ರಸ್ತೆ ಬದಿಯಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net