ಕಾರ್ ಬಳಸಿ ಅಜವಾನ್ ರಾಶಿ ಮಾಡಿದ ರೈತ....!

1206528
Published on

ವಿಜಯಪುರ: ಕೃಷಿ ಕಾರ್ಯಕ್ಕೆ ಕೂಲಿ ಕಾರ್ಮಿಕರನ್ನು, ಕೃಷಿ ಯಂತ್ರೋಪಕರಣಗಳನ್ನು ಬಳಸಿದ್ದು ನೋಡಿದ್ದೇವೆ. ಆದರೆ, ಇಲ್ಲೋರ್ವ ರೈತ ಐಷಾರಾಮಿ ಕಾರ್ ಬಳಸಿ ರಾಶಿ ಮಾಡಿದ್ದು ಗಮನ ಸೆಳೆದಿದೆ.

ಮುದ್ದೇಬಿಹಾಳ ತಾಲೂಕಿನ ಶಿರೂರ ಗ್ರಾಮದ ರೈತ ಮುತ್ತಣ್ಣ ಪ್ಯಾಟಿಗೌಡರ ಮಹೀಂದ್ರಾ ಕೆಯುವಿ100 ಕಾರ್ ಬಳಸಿ ಅಜವಾನ್ ರಾಶಿ ಮಾಡಿದ್ದಾರೆ.

ಕೂಲಿಕಾರರ ಸಮಸ್ಯೆ ಹಾಗೂ ಸಕಾಲಕ್ಕೆ ಸಿಗದ ಯಂತ್ರೋಪಕರಣಗಳಿಂದಾಗಿ ಬೇಸತ್ತು ಕಾರ್ ಬಳಸಿದ್ದಾಗಿ ಮುತ್ತಣ್ಣ ಹೇಳುತ್ತಾರೆ. ಜಮೀನಿನಲ್ಲಿ ಕಣ ನಿರ್ಮಿಸಿ ಅಜವಾನ್ ಫಸಲು ಹಾಕಿ ಅದರ ಮೇಲೆ ಕಾರ್ ಚಲಾಯಿಸಿ ಕಾಳು ಬಿಡಿಸುತ್ತಿದ್ದಾರೆ. ಬಳಿಕ ಬೆರಳೆಣಿಕೆಯಷ್ಟು ಕೂಲಿ ಕಾರ್ಮಿಕರ ಮೂಲಕ ಅಜವಾನ್ ತೆಗೆದು ರಾಶಿ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net