ಸಿನಿಮೀಯ ಶೈಲಿಯಲ್ಲಿ ಕಾರು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನ: ಎಂಟು ಕಾರುಗಳ ವಶ

Car Theives Yelahanka Newtown 19 FEB 20
Published on

ಬೆಂಗಳೂರು: ಈ ಇಬ್ಬರು ಕಾರು ಕಳ್ಳರು ಎಲ್ಲರಂತಲ್ಲ. ಕಳ್ಳತನದಲ್ಲೂ ಒಂದು ಸಿನಿಮೀಯತೆಯನ್ನು ಅಳವಡಿಸಿಕೊಂಡವರು. ಪೊಲೀಸರಿಗೆ ಸೆರೆಸಿಕ್ಕಾಗ ಅವರ ಸಿನಿಮೀಯ ಶೈಲಿಯ ಕಾರು ಕಳ್ಳತನದ ಮಾದರಿ ಬಯಲಾಗಿದೆ. ಅವರಿಂದ 8 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಲಹಂಕ ನ್ಯೂಟೌನ್ ಪೊಲೀಸರು, ಖಲೀಲ್ ಉಲ್ಲಾ, ಅಕ್ಷಯ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, 8 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮೊದಲು ಕಾರು ಮಾಲೀಕರನ್ನು ಪರಿಚಯಿಸಿಕೊಳ್ಳುತ್ತಿದ್ದರು. ನಂತರ ದಾಖಲೆ ನೀಡಿ ಕಾರನ್ನು ಬಾಡಿಗೆ ಗೆ ಪಡೆದುಕೊಳ್ಳುತ್ತಿದ್ದರು.

ಹೀಗೆ ಸುಮಾರು ಎರಡು, ಮೂರು ಬಾರಿ ಹೆಚ್ಚು ಹಣ ನೀಡಿ ಕಾರನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದರು. ಮಾಲೀಕರಿಗೆ ತೀರ ಹತ್ತಿರವಾದ ನಂತರ ದಾಖಲೆ ನೀಡದೇ, ಕಾರು ಬಾಡಿಗೆಗೆ ಪಡೆದು ಪರಾರಿಯಾಗುತ್ತಿದ್ದರು. ನಂತರ ಕದ್ದ ಕಾರನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಗೌಡ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತನಿಖೆ ವೇಳೆ ಆರೋಪಿಗಳು 10 ಕಾರು ಕದ್ದಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net