ಕಾರು ಮಾರುವ ನೆಪದಲ್ಲಿ 10 ಲಕ್ಷ ರೂ. ದೋಚಿದ ಖದೀಮರು

Thief
Published on

ಸವಣೂರ: ಇನೋವಾ ಕಾರು ಮಾರಾಟ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬನ 10 ಲಕ್ಷ ರೂ. ಹಣವನ್ನು ದೋಚಿರುವ ಟನೆ ಇಲ್ಲಿಯ ತಾಲೂಕು ಕ್ರೀಡಾಂಗಣದ ಬಳಿ ಬುಧವಾರ ನಡೆದಿದೆ.

ಹಾವೇರಿಯ ಇಲಿಯಾಸಅಹ್ಮದ್​ ದಾವೂದಸಾಬ ಮೊರಟಗಿ (47) ಎಂಬುವರ ಹಣ ದೋಚಿರುವುದು.

ಇವರಿಗೆ ೋನ್​ ಮೂಲಕ ಕರೆ ಮಾಡಿದ ಮೂವರು ಅಪರಿಚಿತರು ನಮ್ಮ ಇನೋವಾ ಕಾರು ಮಾರಾಟ ಮಾಡುವುದಿದೆ. 10 ಲಕ್ಷ ರೂ. ತೆಗೆದುಕೊಂಡು ಬಂದು ಕಾರು ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಅದರಂತೆ ಇಲಿಯಾಸಅಹ್ಮದ್​ ಹಣ ತೆಗೆದುಕೊಂಡು ತನ್ನ ಕಾರಿನಲ್ಲಿ ಸವಣೂರ ತಾಲೂಕು ಕ್ರೀಡಾಂಗಣದ ಬಳಿ ಬಂದಾಗ ಆತನ ಗಮನ ಬೇರೆಡೆ ಸೆಳೆದ ಖದೀಮರು ಆತನ ಕಾರಿನಲ್ಲಿದ್ದ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net