ಇಂದು ಕಾರು ರ್ಯಾಲಿಗೆ ಚಾಲನೆ

23 08 2025_BGR_RURAL-PAGE_05
ಅರಿಶಿಣಕುಂಟೆ ಬಳಿ ಕಾಂಗ್ರೆಸ್​ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​ ಮಾತನಾಡಿದರು. ಕಾಂಗ್ರೆಸ್​ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್​.ಗೌಡ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ, ಸದಸ್ಯ ಬಿ.ಜಿ.ವಾಸು, ರಂಗಸ್ವಾಮಿ, ಪ್ರಕಾಶ್​ಬಾಬು ಇದ್ದರು.
Published on

ನೆಲಮಂಗಲ : ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರುದ್ಧ ನಡೆಸುತ್ತಿರುವ ಹುನ್ನಾರ ಖಂಡಿಸಿ ವಿಧಾನಸಭಾ ೇತ್ರದ ಶಾಸಕನಾಗಿ ಹಾಗೂ ೇತ್ರದ ಭಕ್ತನಾಗಿ 400ಕ್ಕೂ ಹೆಚ್ಚು ಕಾರುಗಳ ಮೂಲಕ ಆ.23ರಂದು ಬೃಹತ್​ ಯಾತ್ರೆ ಕೈಗೊಳ್ಳಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ಹೇಳಿದರು. ನಗರದ ಅರಿಶಿಣಕುಂಟೆ ಬಳಿ ಕಾಂಗ್ರೆಸ್​ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು. ಕಾರು ರ್ಯಾಲಿಗೆ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದರು.

ಬೆಳಗ್ಗೆ ನಗರದ ಡಾ.ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಸಮಾವೇಶಗೊಂಡು ರ್ಯಾಲಿಗೆ ಚಾಲನೆ ನೀಡಲಾಗುವುದು. ಬಳಿಕ ಧರ್ಮಸ್ಥಳಕ್ಕೆ ತಲುಪುತ್ತಿದ್ದಂತೆ ಭಕ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರು ಸಂಚಾರ ನಿಯಮ ಪಾಲಿಸಿ ಯಾವುದೇ ಅಹಿತಕರ ಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಕಾರು ರ್ಯಾಲಿ ನಡೆಸುತ್ತಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಮುಖಂಡರು ಸಹಕಾರ ನೀಡಬೇಕು ಎಂದರು. ನಗರಸಭೆ ಅಧ್ಯಕ್ಷ ಗಣೇಶ್​, ಉಪಾಧ್ಯಕ್ಷ ಆನಂದ್​, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲಿಟರಿ ಮೂರ್ತಿ, ಕಾಂಗ್ರೆಸ್​ ತ್ಯಾಮಗೊಂಡ್ಲು ಬ್ಲಾಕ್​ ಅಧ್ಯಕ್ಷ ಜಗದೀಶ್​, ಮುಖಂಡ ಎಂ.ಕೆ.ನಾಗರಾಜು, ಕೆಂಪರಾಜು, ಸಿ.ಎಂ.ಗೌಡ, ಚಿಕ್ಕಣ್ಣ, ಲ್ಮಕಾಂತ್​, ನಾರಾಯಣ್​ಗೌಡ, ಅರ್ಜುನ್​, ಕಾಚನಹಳ್ಳಿ ಮನು, ರವಿಕುಮಾರ್​ ಇತರರು ಇದ್ದರು.

ಧರ್ಮಸ್ಥಳ ಹಿಂದುಗಳ ಭಾವನೆಗಳ ಸಂಕೇತ. ಶ್ರೀೇತ್ರ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಬೇಸರದ ಸಂಗತಿ. ರಾಜ್ಯ ಸರ್ಕಾರ ಅನಾಮಿಕ ವ್ಯಕ್ತಿ ಮಾಡಿದ್ದ ಆರೋಪವನ್ನು ಸೂಕ್ತವಾಗಿ ತನಿಖೆ ಮಾಡುತ್ತಿದೆ. ಧರ್ಮಾಧಿಕಾರಿಗಳು ಸಮಾಜಕ್ಕೆ ಸಾಕಷ್ಟು ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಕೆಲ ಕಿಡಿಗೇಡಿಗಳು ಅವರು ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. > ಎನ್​.ಶ್ರೀನಿವಾಸ್​ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net