

ಮಂಗಳೂರು : ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ ಹಾಗೂ ಅಬ್ಲೇಝ್ ಮೋಟರ್ ಸ್ಪೋರ್ಟ್ಸ್ ಕ್ಲಬ್
ವತಿಯಿಂದ ನಗರದ ಗೋಲ್ಡ್‌ಫಿಂಚ್ ಸಿಟಿಯಲ್ಲಿ feb.14ರಿಂದ 16ರ ವರೆಗೆ ಡರ್ಟ್ ಪ್ರಿಕ್ಸ್ 8 ಕಾರ್ ರೇಸ್ ಹಾಗೂ ಅಟೊ ಎಕ್ಸ್‌ಪೊ ನಡೆಯಲಿದೆ.
.14ರಂದು ಮಧ್ಯಾಹ್ನ 3.30ಕ್ಕೆ ನಗರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಉದ್ಘಾಟನೆ ನಡೆಯಲಿದೆ. ತಂಡಗಳ ಪರಿಚಯ, ರೇಸ್ ಕಾರು, ಬೈಕ್ ಪ್ರದರ್ಶನ ಏರ್ಪಡಿಸಲಾಗಿದೆ. ಮೋಟರ್ ಸ್ಪೋರ್ಟ್ಸ್ ತಜ್ಞರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ೆ.15ರಂದು ನಗರದ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಅಟೊ ಎಕ್ಸ್‌ಪೊ ಹಾಗೂ ತಜ್ಞರಿಂದ ರೇಸ್ ತರಬೇ ನಡೆಯಲಿದೆ ಎಂದು ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸುಧೀರ್ ಬಿ.ಕೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
.16ರಂದು ಬೆಳಗ್ಗೆ 8ರಿಂದ ಕಾರುಗಳ ಡರ್ಟ್ ಟ್ರ್ಯಾಕ್ ರೇಸ್ ನಡೆಯಲಿದ್ದು, 3000 ಸಿಸಿ, 1600 ಸಿಸಿ, 1400 ಸಿಸಿ, 800 ಸಿಸಿ ಸಾಮರ್ಥ್ಯದ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮೇಘಾಲಯ, ಬೆಂಗಳೂರು, ಗೋವಾ, ಮೈಸೂರು, ಚಿಕ್ಕಮಗಳೂರು ಮುಂತಾದ ಪ್ರದೇಶಗಳಿಂದ ಕಾರ್ ರೇಸ್ ಪ್ರಿಯರು ಆಗಮಿಸುವರು ಎಂದು ಅಟೊ ಬ್ಲೇಝ್‌ನ ಧನುಶ್ ತಿಳಿಸಿದರು.
1.5 ಕಿ.ಮೀ ಉದ್ದದ ಲೂಪ್ ಟ್ರ್ಯಾಕ್ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ರೇಸ್ ನಡೆಯಲಿದೆ. ಅತಿ ವೇಗದ ಚಾಲಕ, ಉತ್ತಮ ಚಾಲಕ ಪ್ರಶಸ್ತಿಗಳೊಂದಿಗೆ ಟೀಂ ಟ್ರೋಫಿ, ಕರಾವಳಿಯ ಉತ್ತಮ ಚಾಲಕರಿಗಾಗಿ ಕಿಂಗ್ ಆ್ ಕೋಸ್ಟ್ ಮತ್ತಿತರ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಆರೂರು ವಿಕ್ರಂ ರಾವ್, ಅಟೊ ಬ್ಲೇಝ್‌ನ ಪೂರ್ಣಚಂದ್ರ ಉಪಸ್ಥಿತರಿದ್ದರು.