ಕಾರು ಪಲ್ಟಿ, ಓರ್ವ ಸಾವು

Accident
Published on

ಎಂ.ಕೆ.ಹುಬ್ಬಳ್ಳಿ: ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬುಧವಾರ ಸಂಜೆ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ದೇವೇಂದ್ರ ಇಳಿಗೇರ (22) ಮೃತ ವ್ಯಕ್ತಿ.

ಕಾರಿನಲ್ಲಿದ್ದ ಕಿರಣ ಅರ್ಜುನ ಸಾಗರ, ಹಾಗೂ ಆಕಾಶ ಗುರುವಣ್ಣವರ ಗಂಭೀರ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net