ಕಾರು ರಸ್ತೆಯ ಬದಿಯ ಗುಂಡಿಗೆ ಬಿದ್ದು ವೃದ್ಧೆ ಸಾವು

Crime Logo
Published on

ಬ್ಯಾಡಗಿ: ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಮೋಟೆಬೆನ್ನೂರ ಬಳಿ ಎನ್‌ಎಚ್-48ರಲ್ಲಿ ಬುಧವಾರ ನಡೆದಿದೆ.
ಹರಿಹರ ನಗರದ ಮೈಮಾನಬಿ ರೆಹಮಾನಖಾನ (72) ಮೃತ ವೃದ್ಧೆ.
ಇವರು ಕಾರಿನಲ್ಲಿ ರಾಣೆಬೆನ್ನೂರ ಕಡೆಯಿಂದ ಹಾವೇರಿ ಕಡೆಗೆ ತೆರಳುತ್ತಿದ್ದರು. ಈ ಸಮಯದಲ್ಲಿ ದಾರಿ ಮಧ್ಯೆ ಕಾರಿನ ಟೈಯರ್ ಬ್ಲಾಸ್ಟ್ ಆಗಿದೆ. ಇದರಿಂದ ಕಾರು ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದು, ಕಾರಿಯಲ್ಲಿದ್ದ ವೃದ್ಧೆ ಮೃತಪಟ್ಟಿದ್ದಾರೆ. ಇನ್ನೂಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net