

ಕಡಬ: ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಮಾಯಿಲ್ಗ ಎಂಬಲ್ಲಿ ಕಾರು ಮಗುಚಿ ಬಿದ್ದ ಘಟನೆ ಭಾನುವಾರ ನಡೆದಿದೆ. ಮರ್ದಾಳದಿಂದ ಕುದ್ಮಾರು ಕಡೆಗೆ ಸಂಚಾರಿಸುತ್ತಿದ್ದ ಮರ್ದಾಳ ಮೂಲದ ಕುಟುಂಬವಿದ್ದ ಕಾರು ಎಡಬದಿಯ ಗದ್ದೆಯಂಚಿಗೆ ಬಿದ್ದಿದೆ. ಕಾರಿನಲ್ಲಿದ್ದವರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.