ಬೆಂಕಿಗೆ ಆಹುತಿಯಾದ ಕಾರು

Car fire
Published on

ಶಿರಸಿ: ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟುಹೋದ ಘಟನೆ ನಗರದ ಶ್ರದ್ಧಾನಂದ ಗಲ್ಲಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಯಲ್ಲಾಪುರದ ಆರ್‌ಟಿಒ ಏಜೆಂಟ್ ಮತ್ತು ಡ್ರೈವಿಂಗ್ ಸ್ಕೂಲ್ ಮಾಲೀಕ ಶ್ರೀನಿವಾಸ ಇವರಿಗೆ ಸೇರಿದ ಕಾರು ಸುಟ್ಟಿದೆ. ಗಮನಿಸಿದ ಜನರು ನೀರು ಹಾಕಿ ಕಾರು ಉಳಿಸುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಿಲ್ಲ. ಬೆಂಕಿ ಕೆನ್ನಾಲಿಗಿಗೆ ಸುಟ್ಟು ಕರಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net