ಕಾರ್ ಲೋನ್ ತುಂಬದೆ ಮೋಸ

crime
Published on

ಹುಬ್ಬಳ್ಳಿ: ಮರ್ಸಡಿಸ್ ಬೆಂಜ್ ಕಾರ್ ಮೇಲೆ ರೂಪಾ ಎಂಬುವರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ 18 ಲಕ್ಷ ರೂ. ಸಾಲ ಪಡೆದಿದಲ್ಲದೆ, ಹಣ ತುಂಬದೇ ಮೋಸ ಮಾಡಿದ ಆರೋಪದ ಮೇಲೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹೇಶ ಎಂಬಾತನ ವಿರುದ್ಧ ರೂಪಾ ಪ್ರಕರಣ ದಾಖಲಿಸಿದ್ದಾರೆ. ಬೆಂಜ್ ಕಾರ್ ಖರೀದಿಗಾಗಿ ಮಹೇಶ, ರೂಪಾ ಹೆಸರಿನಲ್ಲಿ ಬ್ಯಾಂಕಿನಲ್ಲಿ 18 ಲಕ್ಷ ರೂಪಾಯಿ ಸಾಲ ಪಡೆದು, ತಾನೇ ತುಂಬುವುದಾಗಿ ಹೇಳಿ ನಂಬಿಸಿದ್ದಾನೆ. ನಂತರ ಲೋನ್ ಹಣ ಪಡೆದು ಹಣ ತುಂಬದಿರುವ ಹಿನ್ನೆಲೆಯಲ್ಲಿ ರೂಪಾ ಲೋನ್ ತುಂಬುತ್ತ್ತ ಬಂದಿದ್ದಾರೆ. ಇತ್ತೀಚೆಗೆ ಉಳಿದ 6.40 ಲಕ್ಷ ರೂ. ಕಟ್ಟುವಂತೆ ಹೇಳಿದಾಗ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮಹೇಶ ಮತ್ತು ಬ್ಯಾಂಕ್‌ನವರು ಕಾರಿನ ಮೇಲೆ ಬೋಜ ಕೂರಿಸದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net