ಕಾರು ಅಡ್ಡಗಟ್ಟಿ ದರೋಡೆ

crime
Published on

ಹುಬ್ಬಳ್ಳಿ: ಕಾರ್‌ನಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿದ 12 ಜನರ ತಂಡ ಕಾರಿನಲ್ಲಿದ್ದ 7 ಲಕ್ಷ ರೂ. ನಗದು ಹಾಗೂ 1.60 ಲಕ್ಷ ರೂ. ಮೌಲ್ಯದ ಐಪೋನ್ ಸೇರಿ ನಾಲ್ಕು ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಮಹಾರಾಷ್ಟ ಮೂಲದ ರಾಹುಲ್ ಸುರ್ವೆ, ಪ್ರವೀಣ ಪಿಸೆ ಎಂಬುವರಿಗೆ ಸೇರಿದ ಹಣ ದರೋಡೆ ಮಾಡಲಾಗಿದೆ. ಗದಗದಿಂದ ಹುಬ್ಬಳ್ಳಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ 2 ಇನೋವಾ ಕಾರಿನಲ್ಲಿ ಬಂದ 12 ಜನರ ತಂಡ ಅಡ್ಡಗಟ್ಟಿದ್ದಾರೆ. ವಾಹನಕ್ಕೆ ಡಿಕ್ಕಿ ಪಡಿಸಿ ಬಂದಿದ್ದೀರಿ ಎಂದು ಜಗಳ ತೆಗೆದು ಚಾಕುವಿನಿಂದ ಇರಿದಿದ್ದಾರೆ. ಮೊಬೈಲ್ ಪೋನ್ ಕಸಿದುಕೊಂಡು ಅಲ್ಲಿಂದ ರೈಲ್ವೆ ನಿಲ್ದಾಣದ ಹತ್ತಿರದ ಹೋಟೆಲೊಂದರ ಹತ್ತಿರ ಬೆಳಗಿನ ಜಾವ 4.30ರ ಸುಮಾರಿಗೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ಶಹರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net