ಕಾರು ಡಿಕ್ಕಿ ಪಾದಚಾರಿ ಮೃತ್ಯು

accident-15
Published on

ಮಂಗಳೂರು: ಪದವಿನಂಗಡಿ ಬಳಿಯ ಪೇರ್ಲಗುರಿ ರಸ್ತೆಯಲ್ಲಿ ಬುಧವಾರ ಸಂಜೆ ಕಾರು ಡಿಕ್ಕಿ ಹೊಡೆದು ಪಾದಚಾರಿ ಅಡಾಲ್ಫ್ ರೋಡ್ರಿಗಸ್ (69) ಮೃತಪಟ್ಟಿದ್ದಾರೆ.

ಕೆ.ಪಿ.ಟಿ.-ಪದವಿನಂಗಡಿ ಮುಖ್ಯ ರಸ್ತೆಯಿಂದ ಪೆರ್ಲಗುರಿ ಕಡೆಗೆ ಸುಮಂತ್ ಎಂಬಾತ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಅಡಾಲ್ಫ್ ರೋಡ್ರಿಗಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ಅವರ ಕಾಲಿನ ಮೇಲೆ ಕಾರಿನ ಎಡಬದಿಯ ಚಕ್ರವು ಹರಿದಿದೆ. ಎಡಕಾಲಿನ ತೊಡೆಯ ಮೂಳೆ ಮುರಿತವಾದಂತೆ ಕಂಡು ಬಂದಿದ್ದು, ಬಲಕಾಲಿನ ಮೊಣಗಂಟು, ಬಲ ಕಿಬ್ಬೊಟ್ಟೆ , ಬಲಮೊಣ ಕೈ ಹಾಗೂ ಬಲಭುಜದಲ್ಲಿ ಗಾಯವಾಗಿದ್ದು, ತಕ್ಷಣ ಅಪಘಾತ ಪಡಿಸಿದ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net