ಕಾರು ಡಿಕ್ಕಿ ಕೆಐಒಸಿಎಲ್ ಉದ್ಯೋಗಿ ಮೃತ್ಯು

accident-15
Published on

ಮಂಗಳೂರು : ಕಾವೂರು ಜಂಕ್ಷನ್‌ನ ಕೆಐಒಸಿಎಲ್ ಕ್ವಾರ್ಟ್ರಸ್ ಮುಖ್ಯಗೇಟಿನ ಎದುರು ಮಂಗಳವಾರ ತಡರಾತ್ರಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೆಐಒಸಿಎಲ್ ಉದ್ಯೋಗಿ ಶೇಖರಪ್ಪ(54) ಮೃತಪಟ್ಟಿದ್ದಾರೆ.


ಶೇಖರಪ್ಪ ಅವರು ಕರ್ತವ್ಯ ಮುಗಿಸಿ ಕ್ವಾರ್ಟ್ರಸ್ ಕಡೆಗೆ ಬರಲು ಮುಖ್ಯಗೇಟಿನ ಎದುರು ಇರುವ ಡಿವೈಡರ್ ಬಳಿ ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿಕೊಂಡು ನಿಂತಿದ್ದಾಗ ರಾತ್ರಿ ಸುಮಾರು 11.25ಕ್ಕೆ ಬೋಂದೆಲ್ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಶೇಖರಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net