ಕಾರು ಪಲ್ಟಿಯಾಗಿ ಎರಡು ವರ್ಷದ ಮಗು ಸಾವು

Crime Logo
Published on

ರಾಣೆಬೆನ್ನೂರ: ಕಾರು ಪಲ್ಟಿಯಾಗಿ ಎರಡು ವರ್ಷದ ಮಗುವೊಂದು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಹಲಗೇರಿ ಗ್ರಾಮದ ಬಳಿ ಸೋಮವಾರ ನಡೆದಿದೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅಗಡಿ ಗ್ರಾಮದ ಮಹ್ಮದ್ ಯಾಸಿನ್ ಮೌಲಾಅಲಿ ಮುಲ್ಲಾ (2) ಮೃತ ದುರ್ದೈವಿ.

ಮೌಲಾಅಲಿ ದುದ್ದುಸಾಬ ಮುಲ್ಲಾ, ನಗಮಾ ಮೌಲಾಸಾಬ ಮುಲ್ಲಾ, ಇಕಲಾ ಮೌಲಾಸಾಬ ಮುಲ್ಲಾ, ಹಸನ ಅಲಿ ಮೌಲಾಸಾಬ ಮುಲ್ಲಾ ಸೇರಿ ನಾಲ್ವರು ಗಾಯಗೊಂಡಿದ್ದಾರೆ.

ಇವರು ತಾಲೂಕಿನ ಹಲಗೇರಿ ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ. ಗಾಯಾಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net