

ಬೆಳ್ತಂಗಡಿ: ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಬುಧವಾರ ರಾತ್ರಿ ಹೆದ್ದಾರಿ ಬದಿಯ ಹಳ್ಳಕ್ಕೆ ಕಾರೊಂದು ಉರುಳಿ ಬಿದ್ದಿದೆ. ಚಾಲಕ ಗುರಿಪ್ಪಳ್ಳ ಕಡೆಯ ಶೇಖರ ಎಂಬುವರು ರಸ್ತೆ ಬದಿ ಕಾರನು ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ರಸ್ತೆ ಬದಿಯ ಮಣ್ಣು ಏಕಾಏಕಿ ಕುಸಿದು ಕಾರು ಚಾಲಕನ ಸಹಿತ ಸುಮಾರು 20 ಅಡಿಗಿಂತ ಹೆಚ್ಚಿನ ಆಳದ ಹಳ್ಳಕ್ಕೆ ಬಿದ್ದಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದು, ಕಾರಿಗೆ ಹಾನಿಯಾಗಿದೆ. ಸ್ಥಳೀಯರು ತಕ್ಷಣ ಧಾವಿಸಿ ಕಾರು ಚಾಲಕನನ್ನು ರಕ್ಷಿಸಿ ಕಾರನ್ನು ಎಳೆದು ಮೇಲ್ಭಾಗಕ್ಕೆ ತರಲು ಸಹಕರಿಸಿದರು.