ಅಪಘಾತದಲ್ಲಿ ಕಾರು ಚಾಲಕನಿಗೆ ಗಾಯ

Published on

ಚಿಂತಾಮಣಿ: ಬೆಂಗಳೂರು-ಚಿಂತಾಮಣಿ ರಾಜ್ಯ ಹೆದ್ದಾರಿಯ ಕೈವಾರ ಕ್ರಾಸ್ ಬಳಿಯ ಡಾಬಾಮುಂಭಾಗದಲ್ಲಿ ಸೋಮವಾರ ರಾತ್ರಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಚಾಲಕನೋರ್ವ ತೀವ್ರವಾಗಿ ಗಾಯಗೊಂಡಿದ್ದಾನೆ.

ಚಾಲಕ ಸೈಯದ್ ಯಾಸಿನ್(30) ಗಾಯಗೊಂಡವ. ಕಾರಿನಲ್ಲಿದ್ದ ಮತ್ತೋರ್ವ ಮುಬಾರಕ್ ಪಾಷ (29) ಹಾಗೂ ಸೈಯದ್ ಯಾಸಿನ್ ಆಂಧ್ರಪ್ರದೇಶದ ಕಡಪಾ ಮೂಲದವರಾಗಿದ್ದು, ಬೆಂಗಳೂರಿನ ಶಿವಾಜಿನಗರದಲ್ಲಿ ಎಲೆಕ್ಟ್ರಿಕಲ್‌ನ ಬಿಡಿ ಭಾಗಗಳನ್ನು ಖರೀದಿಸಿ ಕಡಪಾಗೆ ವಾಪಸಾಗುವಾಗ ಎದುರಿಗೆ ಬಂದ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿವೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net