ನೆಹರೂ ಮೈದಾನದ ಬಳಿ ಕಾರು ಚಾಲಕ ಸಾವು ಕೊಲೆ ಶಂಕೆ

mng--18 april janardana
Published on

ಮಂಗಳೂರು: ನಗರದ ನೆಹರೂ ಮೈದಾನದ ಬಳಿ ಮಂಗಳವಾರ ಸಂಜೆ ಬಂಟ್ವಾಳ ಅಮ್ಮುಂಜೆಯ ಕಾರು ಚಾಲಕ ಜನಾರ್ದನ (45) ಎಂಬವರ ಮೃತದೇಹ ಪತ್ತೆಯಾಗಿದೆ. ಇದೊಂದು ಕೊಲೆ ಪ್ರಕರಣವಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿ, ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸಂಜೆ 5 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಜನಾರ್ದನ ಅವರ ಜತೆ ಕೆಲವರು ಹೊಡೆದಾಟ ನಡೆಸಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.


ಜನಾರ್ದನ ಅವರಿಂದ ಕೆಲವರು ಮೊಬೈಲ್ ಸುಲಿಗೆ ನಡೆಸಿದ್ದ, ಪ್ರಶ್ನಿಸಲು ಹೋದಾಗ ಹೊಡೆದಾಟ ಸಂಭವಿಸಿ ಅದರ ಆಘಾತದಿಂದ ಜನಾರ್ದನ ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net