ಮಣಿಪಾಲದಲ್ಲಿ ವಿದ್ಯುತ್​ ಕಂಬಕ್ಕೆ ಕಾರು ಡಿಕ್ಕಿ...

CAR
Published on

ತಪ್ಪಿದ ಭಾರಿ ಅನಾಹುತ

ವಾಹನ ಬಿಟ್ಟು ಚಾಲಕ ಪರಾರಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಅತಿವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಂಬ ತುಂಡಾಗಿ ತಂತಿಗಳು ರಸ್ತೆ ಮೇಲೆ ಬಿದ್ದ ಘಟನೆ ಮಣಿಪಾಲದಲ್ಲಿ ಆಗಸ್ಟ್​ 4ರಂದು ಬೆಳಗ್ಗೆ ನಡೆದಿದೆ. ಈ ವೇಳೆ ಹೆಚ್ಚಿನ ವಾಹನ ಸಂಚಾರ ಇಲ್ಲದ್ದರಿಂದ ಸಂಭವಿಸಲಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಮಣಿಪಾಲದ ಪೊಲೀಸ್​ ಠಾಣೆಯ ಸಮೀಪದಲ್ಲೇ ಈ ಅಪಘಾತ ನಡೆದಿದೆ. ಬೆಂಗಳೂರು ನೋಂದಣಿ ಹೊಂದಿರುವ ಆ ಕಾರು, ಮಣಿಪಾಲದ ಕಡೆಯಿಂದ ಉಡುಪಿಯತ್ತ ಅತಿ ವೇಗದಲ್ಲಿ ಬರುತಿತ್ತು ಎನ್ನಲಾಗಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಅಪಘಾತದ ಬಳಿಕ ಭಯಗೊಂಡು ಆತ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net