ಕಾರು ಡಿಕ್ಕಿಯಾಗಿ ರಸ್ತೆ ಬದಿ ಹೊರಟಿದ್ದ ಹೋರಿ ಸಾವು

Crime Logo
Published on

ರಾಣೆಬೆನ್ನೂರ: ಕಾರು ಡಿಕ್ಕಿಯಾಗಿ 80 ಸಾವಿರ ರೂ. ಮೌಲ್ಯದ ಹೋರಿ ಮೃತಪಟ್ಟ ಘಟನೆ ನಗರದ ಹೊರವಲಯದ ಎನ್‌ಎಚ್-48ರ ಹಲಗೇರಿ ಸೇತುವೆ ಬಳಿ ಬುಧವಾರ ಸಂಭವಿಸಿದೆ.
ತಾಲೂಕಿನ ಮಾಗೋಡ ಗ್ರಾಮದ ಜಟ್ಟೆಪ್ಪ ಶೇಖಪ್ಪ ಕಮದೋಡ (31) ಎಂಬುವರ ಹೋರಿ ಮೃತಪಟ್ಟಿರುವುದು.
ಇವರು ಹೋರಿಯನ್ನು ಹಿಡಿದುಕೊಂಡು ರಸ್ತೆ ಬದಿಯ ಕಚ್ಚಾ ರಸ್ತೆಯಲ್ಲಿ ಹೊರಟಿದ್ದ ಸಮಯದಲ್ಲಿ ಹರಿಹರ ಕಡೆಯಿಂದ ರಾಣೆಬೆನ್ನೂರ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಹೋರಿ ಸ್ಥಳದಲ್ಲಿಯೆ ಮೃತಪಟ್ಟಿದೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net