ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Crime Logo
Published on

ರಾಣೆಬೆನ್ನೂರ: ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ನಗರದ ಹೊರವಲಯದ ಯರೇಕುಪ್ಪಿ ರಸ್ತೆಯ ಎನ್‌ಎಚ್-48ರ ಸೇತುವೆ ಸಮೀಪ ಭಾನುವಾರ ಸಂಭವಿಸಿದೆ.
ಹಾನಗಲ್ಲ ತಾಲೂಕಿನ ಹೋತನಹಳ್ಳಿಯ ರಾಜಪ್ಪ ಫಕ್ಕೀರಪ್ಪ ಹರಿಜನ ಮೃತ ವ್ಯಕ್ತಿ.
ಇವರು ರಸ್ತೆ ದಾಟುತ್ತಿದ್ದ ಸಮಯದಲ್ಲಿ ಕಾರು ಡಿಕ್ಕಿಯಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net