ಅಧಿಕಾರಿಗಳಿಂದ ಮುಖ್ಯಪೇದೆಗೆ ಅಂತಿಮ ನಮನ

3 smg 3
Published on

ಶಿವಮೊಗ್ಗ: ಗಾಡಿಕೊಪ್ಪ ಬಳಿ ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿ ಮೃತಪಟ್ಟ ಮುಖ್ಯಪೇದೆ ಸೈಯದ್ ಜುಲ್ಪೀಕರ್ ಅವರ ಪಾರ್ಥಿವ ಶರೀರಕ್ಕೆ ಭಾನುವಾರ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ನಗರದ ವಾದಿ ಎ ಹುದಾ ಬಡಾವಣೆಯಲ್ಲಿದ್ದ ಜುಲ್ಪೀಕರ್ ಅವರ ಮನೆಗೆ ಪೂರ್ವ ವಲಯದ ಡಿಜಿಪಿ ಎಸ್.ರವಿ, ಎಸ್ಪಿ ಕೆ.ಎಂ.ಶಾಂತರಾಜು, ಎಎಸ್ಪಿ ಡಾ. ಎಚ್.ಟಿ.ಶೇಖರ್ ಮತ್ತಿತರರು ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಶನಿವಾರ ರಾತ್ರಿ ಕರ್ತವ್ಯದಲ್ಲಿದ್ದಾಗ ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಗಾಡಿಕೊಪ್ಪದ ಬಳಿ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜುಲ್ಪೀಕರ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು. ಎಸ್ಪಿ ಕಚೇರಿಯ ಡಿಪಿಒ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಇತ್ತೀಚೆಗೆ ಹೊಸ ಮನೆ ಕಟ್ಟಿಸಿದ್ದರು.

-- 3 ಎಸ್​ಎಂಜಿ 3--

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮುಖ್ಯ ಪೇದೆ ಸೈಯದ್ ಜುಲ್ಪೀಕರ್ ಅವರ ಪಾರ್ಥಿವ ಶರೀರಕ್ಕೆ ಪೂರ್ವ ವಲಯದ ಡಿಜಿಪಿ ಎಸ್.ರವಿ ಅಂತಿನ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net