

ರಾಣೆಬೆನ್ನೂರ: ಓಮಿನಿ ಕಾರು ಡಿಕ್ಕಿ ಪಡಿಸಿ ಮಹಿಳೆ ಸಾವಿಗೆ ಕಾರಣವಾದ ಚಾಲಕನಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 6900 ರೂ. ದಂಡ ವಿಧಿಸಿ ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ಧರಾಜು ಮಂಗಳವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ದಾವಣಗೆರೆ ಜಿಲ್ಲೆ ರಾಮಗೊಂಡನಹಳ್ಳಿಯ ಶ್ರೀನಿವಾಸ ಎಸ್.ಎನ್. ನಾರಾಯಣಸ್ವಾಮಿ ಶಿಕ್ಷೆಗೊಳಗಾದ ಅಪರಾಧಿ.
ಈತ 2022 ಆಗಸ್ಟ್ 11ರಂದು ಹರಿಹರ ಕಡೆಯಿಂದ ರಾಣೆಬೆನ್ನೂರ ಕಡೆಗೆ ಬರುತ್ತಿದ್ದ ಸಮಯದಲ್ಲಿ ತಾಲೂಕಿನ ಮಹಿಕೋ ಫ್ಯಾಕ್ಟರಿ ಬಳಿ ಮುಂದೆ ಹೊರಟಿದ್ದ ಬೈಕ್‌ಗೆ ಡಿಕ್ಕಿ ಪಡಿಸಿ ಅದರಲ್ಲಿ ಹಿಂದೆ ಕುಳಿತ್ತಿದ್ದ ತಾಲೂಕಿನ ಗುಡ್ಡದಬೇವಿನಹಳ್ಳಿಯ ನಿವಾಸಿ ಸಬಿಯಾಭಾನು ಬಡಿಗೇರ ಎಂಬುವರು ಮೃತಪಡುವಂತೆ ಮಾಡಿದ್ದ.
ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಧುಮತಿ ಸಿದ್ನೂರಕರ ವಾದ ಮಂಡಿಸಿದ್ದರು.