ಯಾವುದೋ ಕಾರು ಡಿಕ್ಕಿ; ಬೈಕ್ ಸವಾರ ಸಾವು

Crime Logo
Published on

ಶಿಗ್ಗಾಂವಿ: ಯಾವುದೋ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮುತ್ತಳ್ಳಿ ಬಳಿ ಬುಧವಾರ ನಡೆದಿದೆ.
ತಾಲೂಕಿನ ತಡಸ ಗ್ರಾಮದ ಮಂಜುನಾಥ ವಿನಾಯಕ ರೇವಣಕರ ಮೃತ ಬೈಕ್ ಸವಾರ.
ಈತ ಬೈಕ್ ಮೇಲೆ ಮುತ್ತಳ್ಳಿ ಕಡೆಯಿಂದ ತಡಸಕ್ಕೆ ಬರುತ್ತಿದ್ದ ಸಮಯದಲ್ಲಿ ಹಿಂದಿನಿಂದ ಬಂದ ಯಾವುದೋ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಮಂಜುನಾಥ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net