ಮರಕ್ಕೆ ಕಾರು ಡಿಕ್ಕಿ, ಮೂವರ ಸಾವು

Death
Published on

ಸಾಗರ: ರಾಷ್ಟ್ರೀಯ ಹೆದ್ದಾರಿ 206ರ ಕಾಸ್ಪಾಡಿ ತಿರುವಿನಲ್ಲಿ ಶನಿವಾರ ತಡರಾತ್ರಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಯಚೂರಿನ ಶಕ್ತಿನಗರದ ಆರ್​ಟಿಪಿಎಸ್ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್ (52), ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ (61), ಜಂಟಿ ಕಾರ್ಯದರ್ಶಿ ಸಿದ್ದಪ್ಪ (40) ಮೃತರು. ಕಾರಿನಲ್ಲಿದ್ದ ಖಜಾಂಚಿ ನಾಗರಾಜ್ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿದೆ.

ಜೋಗದ ಕೆಪಿಸಿಸಿ ಉದ್ಯೋಗಿ ಯೊಬ್ಬರ ಮಗಳ ನಾಮಕರಣ ಕಾರ್ಯಕ್ರಮಕ್ಕೆ ರಾಯಚೂರಿನಿಂದ ಬರುತ್ತಿದ್ದಾಗ ಕಾಸ್ಪಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net