ರಾಷ್ಟ್ರೀಯ ಹೆದ್ದಾರಿಯಲ್ಲಿ ತಾತ್ಕಾಲಿಕ ಡಿವೈಡರ್‌ಗೆ ಕಾರು ಡಿಕ್ಕಿ

car accident
ಮಲವಗೊಪ್ಪದ ಬಳಿ ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ತಡೆಗೋಡೆ ಮೇಲೆ ಹತ್ತಿ ನಿಂತಿದೆ.
Published on

ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಡುವೆ ಮಲವಗೊಪ್ಪದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ತಾತ್ಕಾಲಿಕ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ತಡೆಗೋಡೆ ಮೇಲೆ ಹತ್ತಿ ನಿಂತಿದೆ.

ಮಲವಗೊಪ್ಪ ಮತ್ತು ಹರಿಗೆ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ವಾಹನಗಳು ರಸ್ತೆಯ ಒಂದೇ ಬದಿಯಲ್ಲಿ ಸಂಚರಿಸುವಂತೆ ಕಾಂಕ್ರೀಟ್ ಬ್ಯಾರಿಕೇಡ್ ಬ್ಲಾಕ್‌ಗಳನ್ನು ನಡು ರಸ್ತೆಯಲ್ಲಿ ಇಡಲಾಗಿತ್ತು. ಇದಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ ಹೊಡೆದು ರಸ್ತೆ ಪಕ್ಕದ ರೇಲಿಂಗ್ ಮೇಲೆ ಹತ್ತಿದೆ. ಕಾರು ಭದ್ರಾವತಿ ಕಡೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿತ್ತು. ಕಾರು ಚಾಲಕ ವಿನಯ್ ಎಂಬಾತನಿಗೆ ಗಾಯವಾಗಿದ್ದು, ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net