ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಭಸ್ಮ

07M.D.R.2
Published on

ಮದ್ದೂರು: ಪಟ್ಟಣದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ (ಡಿಸೇಲ್ ಕಾರು) ಶಾರ್ಟ್ ಸರ್ಕ್ಯೂಟಾಗಿ ಕಾರು ಬೆಂಕಿಗಾಹುತಿಯಾಗಿದೆ.

ಸೆಸ್ಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಮೈಸೂರು ಮೂಲದ ಮನೋಹರ್ ಅವರ ಕಾರು ಭಸ್ಮವಾಗಿದೆ. ಕಾರ್ಯ ನಿಮಿತ್ತ ಶುಕ್ರವಾರ ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಹೋಗುವ ಸಂದರ್ಭದಲ್ಲಿ ಮಾರ್ಗಮಧ್ಯೆ ಪಟ್ಟಣದ ಮದ್ದೂರಮ್ಮ ದೇಗುಲದ ಸಮೀಪದ ಎಕ್ಸ್ ಪ್ರೆಸ್ ವೇನಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನಲ್ಲಿದ್ದ ಮನೋಹರ್ ಮತ್ತು ಕುಟುಂಬದ ಸದಸ್ಯರು ಕಾರಿನಿಂದ ಕೆಳಗೆ ಇಳಿದು ಬಂದಿದ್ದಾರೆ.

ನಂತರ, ಕಾರು ಧಗಧಗ ಎಂದು ಉರಿಯುತ್ತಿರುವುದನ್ನು ಕಂಡ ಇತರ ವಾಹನ ಸವಾರರು ಅಗ್ನಿಶಾಮಕದಳದವರಿಗೆ ತಿಳಿಸಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದ ದಳ ಸಿಬ್ಬಂದಿ ಬೆಂಕಿ ನಂದಿಸಿದರೂ ಬಹುತೇಕ ಕಾರು ಸುಟ್ಟು ಕರಕಲಾಗಿದೆ.

ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net