ಕಾರು-ಬೈಕ್ ಭೀಕರ ಅಪಘಾತ; ಅಪ್ಪಳಿಸಿದ ಹೊಡೆತಕ್ಕೆ ಕಾರಿನ ಟಾಪ್​ಗೆ ನೆಗೆದುಬಿದ್ದ ಶವ!

Accident
ಅಪಘಾತಕ್ಕೆ ಒಳಗಾದ ಲಾರಿಗಳ ಚಿತ್ರ ಒಳಗೆ ಸುದ್ದಿಯಲ್ಲಿದೆ..
Published on

ಚಾಮರಾಜನಗರ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಶವ ಕಾರ್​ ಟಾಪ್​ಗೆ ನೆಗೆದುಬಿದ್ದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ.

ಕೊಳ್ಳೆಗಾಲದ ನರೀಪುರ ಬಳಿ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಉಮ್ಮತ್ತೂರು ಗ್ರಾಮದ ಮಹದೇವಸ್ವಾಮಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಮಹದೇವಸ್ವಾಮಿ ಅವರ ಮೃತದೇಹ ಕಾರ್ ಟಾಪ್​ಗೆ ನೆಗೆದುಬಿದ್ದಿದೆ.

ಕಾರಿನ ಮೇಲೆ ಬಿದ್ದ ಶವ

ಇನ್ನೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷವೆಂದರೆ ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಸಾಗುತ್ತಿದ್ದ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರು ತಮ್ಮ ಕಾರಿನಲ್ಲಿ ಗಾಯಾಳುವನ್ನು ಕರೆದೊಯ್ಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಯಾಳುವನ್ನು ಕರೆದೊಯ್ಯಲು ನೆರವಾದ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net