ನಿಂತಿದ್ದ ಕಾರಿಗೆ ರಿಕ್ಷಾ ಡಿಕ್ಕಿ, ಚಾಲಕ ಸಾವು

sunil
Published on

ಉಡುಪಿ: ಗುಂಡಿಬೈಲಿನಲ್ಲಿ ರಸ್ತೆ ಬದಿಯಲ್ಲಿ ಮಂಗಳವಾರ ಸಾಯಂಕಾಲ ನಿಂತಿದ್ದ ಕಾರಿಗೆ ರಿಕ್ಷಾ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಸಾವನ್ನಪ್ಪಿದ್ದಾರೆ. ಆದಿ ಉಡುಪಿ ಮೂಡುಬೆಟ್ಟು ನಿವಾಸಿ ಸುನಿಲ್ (44) ಮೃತಪಟ್ಟ ಚಾಲಕ.

ಅಂಬಾಗಿಲಿನಿಂದ ಕಲ್ಸಂಕ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ರಿಕ್ಷಾದಿಂದ ಎಸೆಯಲ್ಪಟ್ಟ ಚಾಲಕನಿಗೆ ಗಂಭೀರ ಗಾಯವಾಗಿತ್ತು. ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಸುನೀಲ್ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net