

ಮುಂಡಗೋಡ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದರೆ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಪಾಳಾಕ್ರಾಸ್ ಸನಿಹ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಪಟ್ಟಣದ ಬಸವನಬೀದಿಯ ಗಣೇಶ ಗಾಣಿಗೇರ, ಮಹೇಶ ಗಾಣಿಗೇರ ಎಂಬ ಸಹೋದರರೆ ದಾರುಣವಾಗಿ ಸಾವನ್ನಪ್ಪಿದ್ದಾರೆ.ಪಾಳಾ ಗ್ರಾಮದಲ್ಲಿ ಮಾರಿಕಾಂಬಾದೇವಿಯ ಜಾತ್ರೆ ನಡೆಯುತ್ತಿದ್ದು ರಾತ್ರಿ ವೇಳೆ ಐದು ಜನರು ಜಾತ್ರೆಗೆ ತೆರಳುತ್ತಿದ್ದಾಗ ಪಾಳಾ ಸನಿಹದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ದುಘ೯ಟನೆ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.