ಕಾರು ಡಿಕ್ಕಿಯಾಗಿ ಜೋಕಾಲಿ ಆಡುತ್ತಿದ್ದ ಬಾಲಕಿ ಮೃತ್ಯು

Accident
ಅಪಘಾತಕ್ಕೆ ಒಳಗಾದ ಲಾರಿಗಳ ಚಿತ್ರ ಒಳಗೆ ಸುದ್ದಿಯಲ್ಲಿದೆ..
Published on

ಕುಂದಾಪುರ: ಮನೆಯ ಅಂಗಳದಲ್ಲಿ ಜೋಕಾಲಿ ಆಡುತ್ತಿದ್ದ ಬಾಲಕಿ, ಕಾರು ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ತಾಲೂಕಿನ ಬೀಜಾಡಿ ಗ್ರಾಮ ನಿವಾಸಿ, ಸದಾನಂದ - ಅನಿತಾ ದಂಪತಿ ಪುತ್ರಿ ಪ್ರಾಧಾನ್ಯ (9) ಮೃತ ಬಾಲಕಿ. ಶಾಲೆಗೆ ಬೇಸಿಗೆ ರಜೆಯಾದ್ದರಿಂದ ಸೋಮವಾರ ಮನೆಯ ಅಂಗಳದ ಎದುರುಗಡೆ ಮರಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಆಡುತ್ತಿದ್ದರು. ಸನಿಹದಲ್ಲಿ ನಿಲ್ಲಿಸಿದ್ದ ಕಾರನ್ನು ಸಂತೋಷ ಎಂಬಾತ ನಿರ್ಲಕ್ಷೃದಿಂದ ಚಲಾಯಿಸಿದ್ದರಿಂದ ಜೋಕಾಲಿ ಆಡುತ್ತಿದ್ದ ಪ್ರಾಧಾನ್ಯಳಿಗೆ ಡಿಕ್ಕಿ ಹೊಡೆದಿದೆ. ಆಕೆ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ, ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net